ಎಫ್ಎಸ್ಐ ವರದಿ ಗಂಭೀರವಾಗಿ ಪರಿಗಣಿಸಿದ್ದು ಅರಣ್ಯ ಕಣ್ಮರೆಯಾಗಿರುವ ಪ್ರದೇಶದ ಚಿತ್ರಗಳ ಕಳುಹಿಸಲು ಕೇಳಿದ್ದೇವೆ. ಅದು ಬಂದ ನಂತರ ವಾಸ್ತವ ಪರಿಶೀಲಿಸಿ ಅರಣ್ಯ ಸಂರಕ್ಷಣೆಗೆ ಕಾರ್ಯಯೋಜನೆ ರೂಪಿಸಲಿದ್ದೇವೆ.
–ಕೆ.ಟಿ.ಹನುಮಂತಪ್ಪ, ಮುಖ್ಯ ಅರಣ್ಯಾಧಿಕಾರಿ ಶಿವಮೊಗ್ಗ
ಎಫ್‌ಎಸ್‌ಐ ದಟ್ಟ ಅರಣ್ಯದ ಪ್ರಮಾಣ ಹೆಚ್ಚಿರುವುದನ್ನು ವರದಿಯಲ್ಲಿ ಗುರುತಿಸಿದೆ. ವನ್ಯಜೀವಿಗಳ ಆವಾಸಕ್ಕೆ ತೊಂದರೆ ಏನೂ ಇಲ್ಲ. ಬದಲಿಗೆ ಅವುಗಳ ಪ್ರಮಾಣ ಹೆಚ್ಚಳಗೊಂಡಿದೆ.
–ಪ್ರಸನ್ನಕೃಷ್ಣ ಪಟಗಾರ, ಡಿಸಿಎಫ್ ಶಿವಮೊಗ್ಗ ವನ್ಯಜೀವಿ ವಿಭಾಗ
ಈಗಲೂ ಕಾಲ ಮಿಂಚಿಲ್ಲ. ಅರಣ್ಯ ಇಲಾಖೆ ಕಾರ್ಯ ಯೋಜನೆ ರೂಪಿಸಿದರೆ ಮುಂದಿನ ದಿನಗಳಲ್ಲಿ ಅರಣ್ಯ ನಾಶವನ್ನು ತಡೆಗಟ್ಟಬಹುದು. ಮಲೆನಾಡಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಪ್ರವೃತ್ತವಾಗಲಿ.
–ಅನಂತ ಹೆಗಡೆ, ಆಶೀಸರ ವೃಕ್ಷ ಲಕ್ಷ ಬಳಗದ ಸಂಚಾಲಕ
ಕಾಳಿಂಗ ಸರ್ಪ ಸೇರಿದಂತೆ ಬಹುತೇಕ ಹಾವುಗಳ ಆವಾಸ ವ್ಯಾಪ್ತಿ 6 ಚದರ ಕಿ.ಮೀ ಮಾತ್ರ. ಹೀಗಾಗಿ ಅರಣ್ಯ ನಾಶ ಅವುಗಳ ಸಂತಾನೋತ್ಪತ್ತಿಯ ಮೇಲೆ ತೀವ್ರ ಪರಿಣಾಮ ಬೀರಿದೆ.