ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಮತ ಪಡೆದು ಗೆದ್ದವರ ಪಟ್ಟಿಯಲ್ಲಿ ಗೀತಾ ಹೆಸರು ಇರಲಿದೆ: ಮಧು ಬಂಗಾರಪ್ಪ

Published 20 ಏಪ್ರಿಲ್ 2024, 15:29 IST
Last Updated 20 ಏಪ್ರಿಲ್ 2024, 15:29 IST
ಅಕ್ಷರ ಗಾತ್ರ

ಆನವಟ್ಟಿ: ‘ಕಳೆದ ವಿಧಾನಸಭೆ ಚುಣಾವಣೆಯಲ್ಲಿ ಕಾಂಗ್ರೆಸ್‍ ನೀಡಿದ್ದ ಗ್ಯಾರಂಟಿಗಳನ್ನು ಈಡೇರಿಸಿದ್ದು, ಈಗ ಪಕ್ಷವು ಲೋಕಸಭಾ ಚುಣಾವಣೆಗೆ ಗ್ಯಾರಂಟಿ ಕಾರ್ಡ್ ತಯಾರಿಸಲು ಕರ್ನಾಟಕ ಮಾದರಿಯಾಗಿದೆ. ರಾಜ್ಯದ ಪ್ರನಾಳಿಕೆ ಸಮಿತಿಯಲ್ಲಿ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೆ. ಬಡವರಿಗೆ ಯೋಜನೆ ರೂಪಿಸುವಲ್ಲಿ ನನ್ನದು ಪಾಲೂ ಇದೆ’ ಎಂದು ಸಚಿವ ಎಸ್. ಮಧು ಬಂಗಾರಪ್ಪ ಸ್ಮರಿಸಿದರು.

ಶನಿವಾರ ಆನವಟ್ಟಿಯಲ್ಲಿ ಕಾಂಗ್ರೆಸ್‍ ಪಕ್ಷದ ಕಚೇರಿ ಹಾಗೂ ಗ್ಯಾರಂಟಿ ಕಾರ್ಡ್ ಉದ್ಘಾಟನೆ ಮತ್ತು ಗ್ಯಾರಂಟಿ ಹಬ್ಬ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಪ್ರನಾಳಿಕೆ ಸಿದ್ದಪಡಿಸಿದ್ದಾಗ ಗ್ಯಾರಂಟಿ ಯೋಜನೆಗಳಿಗೆ ₹36,000 ಕೋಟಿ ಅನುದಾನ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಅನುಷ್ಠಾನಕ್ಕೆ ತಂದಾಗ ₹57,000 ಕೋಟಿ ತಲುಪಿತು. ಹಾಗಾಗಿ ಅಭಿವೃದ್ಧಿ ಕೆಲಸಗಳಿಗೆ ಹಣ ಕಡಿಮೆಯಾಗಿದೆ. ಇಂತಹ ಕಷ್ಟದ ಸಮಯದಲ್ಲೂ ಶಿಕ್ಷಣ ಕ್ಷೇತ್ರಕ್ಕೆ ₹44,000 ಕೋಟಿ ಹಣವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೀಡಿದ್ದಾರೆ ಎಂದರು.

‘ಚುನಾವಣೆ ಬಳಿಕ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹಿಂದೆ ಶಾಸಕನಾಗಿದ್ದ ಅವಧಿಯಲ್ಲಿ ನಿರ್ಮಿಸಿದ್ದ ರಸ್ತೆಗಳು ಇನ್ನೂ ಚನ್ನಾಗಿವೆ. ಈಚೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿರುವ ರಸ್ತೆಗಳು ಕಿತ್ತುಹೋಗುತ್ತಿವೆ’ ಎಂದು ಅವರು ಆರೋಪಿಸಿದರು. 

ಜಿಲ್ಲೆಯಲ್ಲಿ ಕಾಂಗ್ರೆಸ್‍ ಪರವಾದ ವಾತವರಣವಿದ್ದು, ಕಾರ್ಯಕರ್ತರು ಪಕ್ಷದ ಹಾಗೂ ಅಭ್ಯರ್ಥಿಯ ಗೆಲುವಿಗಾಗಿ ಶ್ರಮವಹಿಸಿ ದುಡಿಯುತ್ತಿದ್ದಾರೆ. ಕ್ಷೇತ್ರ ಎಲ್ಲಾ ತಾಲ್ಲೂಕಿನಲ್ಲೂ ಗೀತಾ ಶಿವರಾಜಕುಮಾರ್ ಅವರಿಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಸೊರಬದಲ್ಲಿ ನನಗೆ 45,000 ಮತಗಳ ಲೀಡ್‍ ನೀಡಿದ್ದರು. ಗೀತಾ ಅವರು ಹೆಚ್ಚು ಮತ ಪಡೆಯುವ ಮೂಲಕ ಜಯಗಳಿಸುತ್ತಾರೆ. ಹೆಚ್ಚು ಮತ ಪಡೆದು ಗೆದ್ದವರ ಪಟ್ಟಿಯಲ್ಲಿ ಅವರ ಹೆಸರು ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆನವಟ್ಟಿ ಬ್ಲಾಕ್ ಕಾಂಗ್ರೆಸ್‍ ಅಧ್ಯಕ್ಷ ಸದಾನಂದಗೌಡ ಬಿ. ಪಾಟೀಲ್‍ ಬಿಳಗಲಿ, ಮುಖಂಡರಾದ ಅಣ್ಣಪ್ಪ, ಕೆ.ಪಿ ರುದ್ರಗೌಡ, ಎಚ್‍. ಗಣಪತಿ, ಕೆ.ವಿ ಗೌಡ, ಢಾಕಪ್ಪ, ಆರ್.ಸಿ ಪಾಟೀಲ್, ಚೌಟಿ ಚಂದ್ರಶೇಖರ್ ಪಾಟೀಲ್, ಪಿ.ಎಸ್‍ ಮಂಜುನಾಥ, ಈರಪ್ಪ ಜಡೆ, ಎಲ್‍.ಜಿ ಮಾಲತೇಶ್‍, ದೇವರಾಜ್‍ ತ್ಯಾವರೆ ತೆಪ್ಪ, ಸುರೇಶ್ ಹಾವಣ್ಣನವರ್‍, ಚಾಂದ್ ನೂರಿ, ಫೈರೋಜ್‍ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT