ಶಿಕಾರಿಪುರ: ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮನಸ್ಸು ಮಾಡಿದರೆ ಸರ್ಕಾರಿ ಶಾಲೆಯು ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯಬಹುದು ಎನ್ನುವುದಕ್ಕೆ ಪಟ್ಟಣದ ಸಿದ್ಧಲಿಂಗೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ.

ಮುಖ್ಯಶಿಕ್ಷಕರ ಸತತ ಪರಿಶ್ರಮದ ಫಲವಾಗಿ ಹಲವು ದಾನಿಗಳು, ಸರ್ಕಾರದ ಅನುದಾನ, ಶಾಲಾಭಿವೃದ್ಧಿ ಸಮಿತಿ ಸಹಕಾರದಿಂದ ಶಾಲೆಯ ಮೂಲಸೌಕರ್ಯಕ್ಕೆ ಹೊಸರೂಪ ಸಿಕ್ಕಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಈ ವರ್ಷ ಶಾಲೆಗೆ ಮಕ್ಕಳನ್ನು ಸೇರಿಸಲು ಪೈಪೋಟಿ ಹೆಚ್ಚಿದ್ದು, ರಾಜಕಾರಣಿಗಳು, ಅಧಿಕಾರಿಗಳ ಶಿಫಾರಸ್ಸು ಪಡೆಯುವುದು ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಎರಡು ವರ್ಷದಲ್ಲಿ ಶಾಲೆಗೆ ₹85 ಲಕ್ಷ ಶಾಸಕರ, ಸಂಸದರ ಅನುದಾನ ದೊರೆತಿದೆ. ಹೈಟೆಕ್ ಶೌಚಾಲಯ, ಸುಸಜ್ಜಿತ ಭೋಜನಾಲಯ, ನೂರಕ್ಕೂ ಹೆಚ್ಚು ಅಡಿಕೆ ಗಿಡದೊಂದಿಗೆ ಸುಂದರ ಕೈತೋಟ ನಿರ್ಮಿಸಲಾಗಿದೆ. ಸೋಲಾರ್ ಲೈಟಿಂಗ್ ವ್ಯವಸ್ಥೆ, ರೀಡಿಂಗ್ ಕಾರ್ನರ್, 60 ಮೀಟರ್ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ.

ದಾನಿಗಳ ನೆರವು:

ಬಿಸಿಯೂಟಕ್ಕೆ ದೋಸೆ ತವಾ, ಗ್ರೈಂಡರ್, ಇಡ್ಲಿ ಪಾತ್ರೆ ಸೇರಿ ಹಲವು ಪರಿಕರಗಳನ್ನು ಮುಖ್ಯಶಿಕ್ಷಕರು ನೀಡಿದ್ದರೆ, ರೋಟರಿ ಸಂಸ್ಥೆ ₹2 ಲಕ್ಷ ವೆಚ್ಚದಲ್ಲಿ ಕೊಠಡಿ ನಿರ್ಮಿಸಿದೆ. ಇಡೀ ಶಾಲೆಗೆ ಸಿ.ಸಿ. ಟಿವಿ ಕ್ಯಾಮೆರಾ, ಸ್ಮಾರ್ಟ್ ಟಿವಿ ಅಳವಡಿಸಲಾಗಿದೆ. ಧ್ವಜಸ್ತಂಭ ನಿರ್ಮಾಣ, ಗ್ರಂಥಾಲಯ ನವೀಕರಣ, ಪ್ರಯೋಗಾಲಯ ಹೀಗೆ ಹಲವು ಸೌಲಭ್ಯಗಳನ್ನು ದಾನಿಗಳು ಕಲ್ಪಿಸಿದ್ದಾರೆ.

ಬಾಂಡ್ ಸೌಲಭ್ಯ:

ಕಳೆದ ವರ್ಷ ಮಕ್ಕಳ ದಾಖಲಾತಿ ಕುಸಿತವಾದ ಕಾರಣಕ್ಕೆ ಶಾಲೆಯ ಮುಖ್ಯಶಿಕ್ಷಕ ಜಬೀವುಲ್ಲಾ ಅವರು ದಾನಿಗಳು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ನೆರವಿನಿಂದ ಶಾಲೆಗೆ ದಾಖಲಾಗುವ ಪ್ರತೀ ವಿದ್ಯಾರ್ಥಿಗೆ ₹1000 ಮೊತ್ತದ ಬಾಂಡ್ ನೀಡುವ ಯೋಜನೆ ರೂಪಿಸಿ 33 ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ವರ್ಷ ಯೋಜನೆ ನಿಲ್ಲಿಸಿದರೂ, ಮಕ್ಕಳ ದಾಖಲಾತಿಗೆ ಪೋಷಕರು ಸಾಲು ನಿಲ್ಲುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.