ಭಾನುವಾರ, ಫೆಬ್ರವರಿ 28, 2021
31 °C

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 6ನೇ ಬಾರಿಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭದ್ರಾವತಿ: ಅಂತರಗಂಗೆ ಪಂಚಾಯಿತಿ ಅಂತರಗಂಗೆ ಕ್ಷೇತ್ರದಿಂದ ಆಯ್ಕೆಯಾದ ನಾಗೇಶ್ ಆರನೇ ಬಾರಿಗೆ ಪಂಚಾಯಿತಿ ಪ್ರವೇಶಿಸಿದ್ದಾರೆ.

‘ಹಣಬಲ, ಚಿನ್ನಾಭರಣ ಹಂಚಿಕೆ ನಡುವೆಯೂ ಜನ ನನ್ನ ಕೆಲಸ ಗುರುತಿಸಿ ಪ್ರೋತ್ಸಾಹಿಸಿ ಗೆಲುವು ಕಾಣಿಸಿದ್ದು ಇದು ಅವರ ಗೆಲುವು’ಎಂದು ಪ್ರತಿಕ್ರಿಯಿಸಿದರು.

ಯರೇಹಳ್ಳಿ ಪಂಚಾಯಿತಿಗೆ ಆಯ್ಕೆಯಾದ ಸಿ.ಆರ್.ಶಿವರಾಂ ನಾಲ್ಕನೇ ಬಾರಿಗೆ ಪಂಚಾಯಿತಿ ಪ್ರವೇಶಿಸಿದ ಖುಷಿಯಲ್ಲಿದ್ದಾರೆ.

ಅರಬಿಳಚಿ ವಡ್ಡರಹಟ್ಟಿ ಎಸ್ಸಿ ಮೀಸಲು ಕ್ಷೇತ್ರದಿಂದ ಗೆದ್ದಿರುವ ಧನಂಜಯ ಎಂ.ಎ. ಸ್ನಾತಕೋತ್ತರ ಪದವೀಧರ ಹಾಗೂ ಬಿಇಡಿ. ಶಿಕ್ಷಣ ಪಡೆದಿದ್ದಾರೆ. ತಮ್ಮ ಪ್ರಥಮ ಚುನಾವಣೆಯಲ್ಲೇ 260 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

ಅಂಗವೈಕಲ್ಯದ ನಡುವೆಯೂ ಚುನಾವಣೆ ಗೆದ್ದಿರುವ ಕಾರೇಹಳ್ಳಿ ಪಂಚಾಯಿತಿ ಸದಸ್ಯೆ ಜಿ. ಮಮತಾ ಪದವಿ ಪಡೆದು ಮೊದಲ ಚುನಾವಣೆ ಎದುರಿಸಿದ್ದಾರೆ. ಇದೇ ಪಂಚಾಯಿತಿಯಿಂದ ಆಯ್ಕೆಯಾಗಿರುವ ನಿವೃತ್ತ ಯೋಧ ಧರ್ಮರಾಯ ಗೆಲುವಿನ ಸಂಭ್ರಮ ಹಂಚಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು