ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ನೆಲೆ ಕಲ್ಪಿಸಲು ಹಕ್ಕಿ ಪಿಕ್ಕಿ ಸಮುದಾಯ ಮನವಿ

ಜಿಲ್ಲಾಡಳಿತಕ್ಕೆ ಹಕ್ಕಿ ಪಿಕ್ಕಿ ಸಮುದಾಯ ಮನವಿ
Published 24 ಮೇ 2023, 15:33 IST
Last Updated 24 ಮೇ 2023, 15:33 IST
ಅಕ್ಷರ ಗಾತ್ರ

ಶಿವಮೊಗ್ಗ: ಅನೇಕ ವರ್ಷಗಳಿಂದ ಶಾಶ್ವತ ನೆಲೆ ಇಲ್ಲದೆ ಪರದಾಡುತ್ತಿದ್ದೇವೆ. ನಮಗೆ ಸ್ವಂತ ಸೂರು ನಿರ್ಮಿಸಿಕೊಡಿ ಎಂದು ಹಕ್ಕಿಪಿಕ್ಕಿ ಸಮುದಾಯದ ಪ್ರಮುಖ ರಾಜು ಮತ್ತು ಸಂತ್ರಸ್ತ ಕುಟುಂಬಗಳು ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಮಾಡಿವೆ.

ಇಲ್ಲಿಯ ಸಾಗರ ರಸ್ತೆ, ಶ್ರೀರಾಂಪುರದ ಬಳಿ ಇರುವ ಹಕ್ಕಿಪಿಕ್ಕಿ ಕ್ಯಾಂಪ್‌ನಲ್ಲಿನ 20ಕ್ಕೂ ಹೆಚ್ಚು ಟೆಂಟ್‌ಗಳು ರಾತ್ರಿ ಸುರಿದ ಮಳೆಗೆ ಹಾನಿ ಆಗಿವೆ. ಗಾಳಿಯ ರಭಸಕ್ಕೆ ಟೆಂಟ್‌ನಲ್ಲಿದ್ದ ದಿನಸಿ ಸಾಮಗ್ರಿಗಳು ಮತ್ತು ವಸ್ತುಗಳು ಸಂಪೂರ್ಣ ಹಾಳಾಗಿವೆ. ಈ ಪರಿಣಾಮದಿಂದ ಬಡ ನಿವಾಸಿಗಳು ಸಂಕಷ್ಟಕ್ಕೀಡಾಗಿದ್ದಾರೆ.

ಹಿಂದೆ 150ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಕುಟುಂಬಗಳು ಹತ್ತಿರದ ವೀರಣ್ಣನ ಬೆನವಳ್ಳಿಯಲ್ಲಿ ಟೆಂಟ್ ನಿರ್ಮಿಸಿಕೊಂಡು ವಾಸವಾಗಿದ್ದವು. ಬಳಿಕ ಅದು ಅರಣ್ಯ ಭೂಮಿ ಎಂಬ ಹಿನ್ನೆಲೆಯಲ್ಲಿ ಕೆಲವು ಕುಟುಂಬಗಳು ಸ್ಥಳಾಂತರಗೊಂಡು ಕಳೆದ ಕೆಲವು ವರ್ಷಗಳಿಂದ ಶ್ರೀರಾಂಪುರದಲ್ಲಿ ವಾಸವಾಗಿದ್ದಾರೆ. ಶಾಶ್ವತ ನೆಲೆ ಬೇಕು ಎಂದು ಹಲವು ಬಾರಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ನಮಗೆ ಸ್ವಂತ ನೆಲೆ ಇನ್ನೂ ಸಿಕ್ಕಿಲ್ಲ. ದಯವಿಟ್ಟು ಸರ್ಕಾರ ಮತ್ತು ಜಿಲ್ಲಾಡಳಿತ ನಮಗೆ ಶಾಶ್ವತ ಸೂರು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT