ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯವು ದೇಹದ ಶಕ್ತಿಶಾಲಿ ಅಂಗ: ಡಾ.ವಿಜೇತ್‌

Published 6 ಅಕ್ಟೋಬರ್ 2023, 16:30 IST
Last Updated 6 ಅಕ್ಟೋಬರ್ 2023, 16:30 IST
ಅಕ್ಷರ ಗಾತ್ರ

ಶಿವಮೊಗ್ಗ: ಯಾವುದೇ ಕಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆದುಕೊಳ್ಳುವುದಕ್ಕಿಂತ ಬರದಂತೆ ಮುಂಜಾಗ್ರತೆ ವಹಿಸುವುದು ಒಳ್ಳೆಯದು ಎಂದು ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ವಿಜೇತ್‌ ಸಲಹೆ ನೀಡಿದರು.

ಸರ್ಜಿ ಆಸ್ಪತ್ರೆಗಳ ಸಮೂಹ ಹಾಗೂ ಗ್ಲೆನ್ಮಾರ್ಕ್ಫಾರ್ಮ ಸಂಯುಕ್ತಾಶ್ರಯದಲ್ಲಿ ಸರ್ಜಿ ಹಾಸ್ಪಿಟಲ್‌ನಲ್ಲಿ ಶುಕ್ರವಾರ ವಿಶ್ವ ಹೃದಯ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮನುಷ್ಯನ ದೇಹದಲ್ಲಿ ಹೃದಯವು ಅತ್ಯಂತ ಪ್ರಮುಖ ಮತ್ತು ಶಕ್ತಿಶಾಲಿ ಅಂಗ. ಎಲ್ಲ ವಯೋಮಾನದವರೂ ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಪ್ರತಿನಿತ್ಯ ವಾಕಿಂಗ್‌, ವ್ಯಾಯಾಮ ಮಾಡುವುದು, ಮದ್ಯಪಾನ, ಧೂಮಪಾನದಿಂದ ದೂರವಿರುವುದು, ಉತ್ತಮ ಆಹಾರ ಕ್ರಮ ಹಾಗೂ ಉತ್ತಮ ಜೀವನ ಶೈಲಿ ರೂಢಿಸಿಕೊಂಡರೆ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಲು ಸಾಧ್ಯ ಎಂದರು.

ಎಚ್ಚರಿಕೆ ಪತ್ರಿಕೆಯ ಸಂಪಾದಕ ವೈ.ಕೆ.ಸೂರ್ಯನಾರಾಯಣ ಮಾತನಾಡಿ, ಸರ್ಜಿ ಸಮೂಹ ಸಂಸ್ಥೆ, ಕೇವಲ ಚಿಕಿತ್ಸೆ ನೀಡಲು ಸೀಮಿತವಾಗದೆ, ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಪರಿಸರ ಸಂರಕ್ಷಣೆ ಚಟುವಟಿಕೆ, ಸಾಮಾಜಿಕ ಕಾರ್ಯ ಚಟುಚಟಿಕೆ, ಅಂಗವಿಕಲರ ಆರೈಕೆ ಹೀಗೆ ಸಮಗ್ರವಾಗಿ ಸಮಾಜಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಗ್ಲೆನ್ಮಾರ್ಕ್ಫಾರ್ಮಾದ ಅನಿಲ್ ಬೇಗೂರು ಉಪಸ್ಥಿತರಿದ್ದರು.

40 ವರ್ಷ ದಾಟಿದವರು ಎರಡು ವರ್ಷಕ್ಕೊಮ್ಮೆ ಹಾಗೂ 50 ವರ್ಷ ದಾಟಿದವರು ವರ್ಷಕ್ಕೊಮ್ಮೆ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು ಕ್ರೀಡಾಪಟುಗಳು ವೈದ್ಯರ ಸಲಹೆ ಪಡೆಯಬೇಕು.
- ಡಾ.ವಿಜೇತ ಹೃದ್ರೋಗ ತಜ್ಞರು ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ
ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ 30 ರಿಂದ 35 ಲೀಟರ್‌ವರೆಗೂ ರಕ್ತವನ್ನು ಹೃದಯ ಪಂಪ್‌ ಮಾಡುತ್ತದೆ. ಪ್ರತಿಯೊಬ್ಬರೂ ನಿರಂತರವಾಗಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು.
- ನಮಿತಾ ಸರ್ಜಿ ನಿರ್ದೇಶಕರು ಸರ್ಜಿ ಸಮೂಹ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT