ಬುಧವಾರ, ಜುಲೈ 28, 2021
24 °C

ಹೊನ್ನಾಳಿ: ರಾಂಪುರದ ಮಠಾಧೀಶ ಹಾಲಸ್ವಾಮಿ ಕೋವಿಡ್‌ನಿಂದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಂಪುರದ ಮಠಾಧೀಶ ಹಾಲಸ್ವಾಮಿ

ಶಿವಮೊಗ್ಗ: ಹೊನ್ನಾಳಿ ತಾಲ್ಲೂಕು ರಾಂಪುರದ ಗದ್ದುಗೆ ಮಠದ ಹಾಲಸ್ವಾಮಿ (56) ಅವರು ಕೊರೊನಾ ಸೋಂಕಿನಿಂದ ಬುಧವಾರ ಇಲ್ಲಿನ ಮೆಗ್ಗಾನ್ ಆಸ್ಪತ್ರೆ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಮೃತಪಟ್ಟಿದ್ದಾರೆ.

ಹಾಲಸ್ವಾಮಿಗಳ ಸಾವಿನೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ರೋಗಿಗಳ ಸಂಖ್ಯೆ 12ಕ್ಕೇರಿದೆ. 

ಜಿಲ್ಲೆಯ 46 ಜನರಿಗೆ ಒಂದೇ ದಿನ ಸೋಂಕು ಇರುವುದು ಖಚಿತಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 644ಕ್ಕೇರಿದೆ. ಬುಧವಾರ ಐವರು ಸೇರದಿಂತೆ ಇದುವರೆಗೂ ಜಿಲ್ಲೆಯ 244 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 388 ಜನರು ವಿವಿಧ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸಮನೆ 6ನೇ ತಿರುವು, ಟಿಪ್ಪುನಗರ ಸೇರಿದಂತೆ ಹಲವೆಡೆಗಳಲ್ಲಿ ಸೀಲ್‌ಡೌನ್‌ ಮಾಡಲಾಗಿದೆ. ಹೊಸಮನೆ ಬಡಾವಣೆಯಲ್ಲಿ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 6ನೇ ಮುಖ್ಯ ರಸ್ತೆಯ 2ನೇ ಅಡ್ಡ ರಸ್ತೆ ಮತ್ತು 6ನೇ ಅಡ್ಡ ರಸ್ತೆ ಸೀಲ್‌ಡೌನ್‌ ಮಾಡಲಾಗಿದೆ. ಎಸ್‌ಪಿಎಂ ರಸ್ತೆಯ  ಮಹಿಳೆಯಿಂದ ಅವರ 15 ವರ್ಷದ ಪುತ್ರಿಗೆ ಸೋಂಕು ಸೋಂಕು ತಗುಲಿದೆ. ಟಿಪ್ಪುನಗರದ 5ನೇ ತಿರುವಿನ ಮೆಕ್ಯಾನಿಕ್ ಒಬ್ಬರಿಗೆ ಸೋಂಕು ತಗುಲಿದೆ. ಗಾಂಧಿ ಬಜಾರ್‌ ಕಸ್ತೂರಿಬಾ ರಸ್ತೆಯ 42 ವರ್ಷದ ವ್ಯಕ್ತಿ, ಶಂಕರಮಠ ರಸ್ತೆಯ ಬ್ಯಾಂಕ್ ಸಿಬ್ಬಂದಿಗೂ ಸೋಂಕು ಇರುವುದು ಗಂಟಲು ದ್ರವ ಪರೀಕ್ಷೆಯಿಂದ ಖಚಿತವಾಗಿದೆ.

ಐವರಿಗೆ ಕೊರೊನಾ ಸೋಂಕು (ಭದ್ರಾವತಿ ವರದಿ)

ತಾಲ್ಲೂಕಿನಲ್ಲಿ ಬುಧವಾರ  ಐದು ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ.

ನಗರಸಭಾ ವ್ಯಾಪ್ತಿಯಲ್ಲಿ ಮೂರು ಪ್ರಕರಣಗಳು, ಗ್ರಾಮಾಂತರ ಭಾಗದಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ. ನಗರದ ಕನಕನಗರ ಏರಿಯಾದ 21 ವರ್ಷದ ಬಾಲಕಿಗೆ ಸೋಂಕು ತಗುಲಿದೆ.  ಬೆಂಗಳೂರುನಿಂದ ವಾರದ ಹಿಂದೆ ಬಂದಿದ್ದರು. ಶೀತ, ಕೆಮ್ಮಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ  ಹುಡ್ಕೊಕಾಲೊನಿಯ 65 ವರ್ಷದ ವೃದ್ಧರಿಗೂ ಸೋಂಕು ದ್ರಢಪಟ್ಟಿದೆ ಎನ್ನಲಾಗಿದೆ. ಬೆಂಗಳೂರುರಿನಿಂದ ಬಂದಿದ್ದ  50 ವರ್ಷದ ವ್ಯಕ್ತಿಯಲ್ಲೂ ಸೋಂಕು ದೃಢಪಟ್ಟಿದೆ.

ಕೈರಾ ಗ್ರಾಮದ ಯುವಕನಿಗೆ ಸೋಂಕು (ಸಾಗರ ವರದಿ)

ತಾಲ್ಲೂಕಿನ ಆನಂದಪುರಂ ಸಮೀಪದ ಕೈರಾ ಗ್ರಾಮದ 24 ವರ್ಷದ ಯುವಕನಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಅವರು ಈಚೆಗೆ ಬೆಂಗಳೂರಿನಿಂದ ಗ್ರಾಮಕ್ಕೆ ಬಂದಿದ್ದರು. ತಾಲ್ಲೂಕಿನ ಸೋಂಕಿತರ ಸಂಖ್ಯೆ 27 ಕ್ಕೆ ಏರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು