ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿಯಲ್ಲಿ ಅನ್ಯಾಯ: ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ

Last Updated 22 ಅಕ್ಟೋಬರ್ 2021, 4:38 IST
ಅಕ್ಷರ ಗಾತ್ರ

ಸೊರಬ: ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಹಾವನೂರು ವರದಿ ಜಾರಿಗೊಳಿಸದಿದ್ದರೆ ಹಿಂದುಳಿದ ಜಾತಿಗಳು ಮತ್ತಷ್ಟು ಶೋಷಣೆ ಅನುಭವಿಸುವಂತಾಗುತ್ತಿತ್ತು ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ ಹೇಳಿದರು.

ಪಟ್ಟಣದ ಬಂಗಾರ ಧಾಮದಲ್ಲಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಹಿಂದುಳಿದ ಸಮುದಾಯಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಹಿಂದುಳಿದ ಸಮುದಾಯಗಳ ಸಾಮಾಜಿಕ ಸ್ಥಿತಿಗತಿ ಬಗ್ಗೆ 1931ರಲ್ಲಿ ಸಿದ್ಧಪಡಿಸಿದ ಕಾಂತರಾಜ್ ವರದಿ ಅನುಷ್ಠಾನಗೊಳಿಸಲು ಮೀನಮೇಷ ಎಣಿಸುತ್ತಿರುವ ಸರ್ಕಾರ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಸಂಘಟನೆ ಕೊರತೆಯಿಂದಾಗಿ ಹಿಂದುಳಿದ ಜಾತಿಗಳಿಗೆ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಪ್ರಬಲ ಜಾತಿಗಳನ್ನು 2 ‘ಎ’ಗೆ ಸೇರಿಸಬಾರದು. ಸುಭಾಷ್ ಆಡಿ ಆಯೋಗವನ್ನು ರದ್ದುಪಡಿಸಿ ಹಿಂದುಳಿದ ಸಮುದಾಯದ ಅಭಿವೃದ್ಧಿಗಾಗಿ ಜಾರಿಗೊಳಿಸಿರುವ ಯೋಜನೆಗಳನ್ನು ಪುನಃ ಜಾರಿಗೊಳಿಸುವ ಮೂಲಕ ಸಮಾಜದ ಪ್ರಗತಿಗೆ ಮುಂದಾಗಬೇಕು. ಮೀಸಲಾತಿಗಾಗಿ ಆಗ್ರಹಿಸಿ ಶಿವಮೊಗ್ಗದಲ್ಲಿ ಅ.30ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರಗತಿಪರ ಒಕ್ಕೂಟಗಳ ಸಂಚಾಲಕ ರಾಜಪ್ಪ ಮಾಸ್ತರ್ ಮಾತನಾಡಿ, ‘ಮೀಸಲಾತಿ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮವಲ್ಲ ಎನ್ನುವುದನ್ನು ಆಳುವ ಸರ್ಕಾರಗಳು ಅರಿಯಬೇಕಿದೆ. ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ಮೀಸಲಾತಿ ದೊರೆತಾಗ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭೆಗಳಿಗೆ ಅವಕಾಶ ದೊರೆಯಲಿದೆ. ಒಂದು ವರದಿ ಬದಲಾಗಿ ಮತ್ತೊಂದು ವರದಿಯ ಅವಶ್ಯಕತೆ ಇಲ್ಲ. ಪ್ರಬಲ ಸಮುದಾಯಗಳು ವಿರೋಧ ವ್ಯಕ್ತಪಡಿಸಿದ್ದರಿಂದ ವೆಂಕಟಸ್ವಾಮಿ, ಚಿನ್ನಪ್ಪ ರಡ್ಡಿ ವರದಿಗಳು ಜಾರಿಯಾಗಲಿಲ್ಲ. ಹಿಂದುಳಿದ ಸಮುದಾಯಗಳು ಒಂದಾಗಿ ಹಕ್ಕಿಗಾಗಿ ಹೋರಾಟ ಮಾಡುವ ಅವಶ್ಯಕತೆ ಇದೆ’ ಎಂದರು.

ಹಿಂದುಳಿದ ಜಾತಿಗಳ ಜಿಲ್ಲಾಧ್ಯಕ್ಷ ವಿ.ರಾಜು, ಪ್ರಧಾನ ಕಾರ್ಯದರ್ಶಿ ಅಶೋಕಕುಮಾರ್, ಸೂಡಾ ಮಾಜಿ ಅಧ್ಯಕ್ಷ ಎನ್. ರಮೇಶ, ಪಿ.ಶೇಷಾದ್ರಿ, ಗೋಪಾಲ, ಅಶೋಕ್, ಲೋಕೇಶ್ ತಾಲ್ಲೂಕು ಈಡಿಗ ಸಮಾಜದ ಅಧ್ಯಕ್ಷ ಕೆ. ಅಜ್ಜಪ್ಪ, ಕುರುಬ ಸಮಾಜದ ಅಧ್ಯಕ್ಷ ನಿಂಗಪ್ಪ, ಮಡಿವಾಳ ಸಮಾಜದ ಅಧ್ಯಕ್ಷ ಗುಡ್ಡಪ್ಪ, ಮುಖಂಡರಾದ ಕೆ. ಮಂಜುನಾಥ್, ತಬಲಿ ಬಂಗಾರಪ್ಪ, ನಾಗರಾಜ ಚಿಕ್ಕಸವಿ, ಅಣ್ಣಪ್ಪ ಹಾಲಘಟ್ಟ, ಎಚ್. ಗಣಪತಿ, ಪ್ರವೀಣ್ ಹಿರೇಇಡಗೋಡು, ಕುಮಾರ್ ಉಮಟೆಗದ್ದೆ, ಎಂ.ಡಿ.ಶೇಖರ್, ಕಲ್ಲಪ್ಪ, ಕೈಸೋಡಿ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT