ಹೊಸನಗರ: ಕಳವು ಪ್ರಕರಣ ಬೆನ್ನತ್ತಿದ ನಗರ ಠಾಣೆ ಪೊಲೀಸರು 48 ಗಂಟೆಯೊಳಗೆ ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಿ, ಅವರಿಂದ ₹ 4 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸಮಗಾರ ಓಣಿಯ ಹನುಮಂತ ತೊಳೆಯಪ್ಪ (26) ಮತ್ತು ಮಂಜುನಾಥ ಬಿಸುಕಲ್ಲೊಡ್ಡರ (36) ಬಂಧಿತರು.

ಹೊಸನಗರದ ನಿಲ್ಸ್ಕಲ್ ಸಮೀಪದ ಕಬಳೆ ಗ್ರಾಮದ ರಿಚರ್ಡ್ ಡಿಸೋಜಾ ಮತ್ತು ಮಾಸ್ತಿಕಟ್ಟೆಯ ಶೇಷಾದ್ರಿ ಎಂಬುವವರ ಮನೆಯಲ್ಲಿ ಆ. 21ರಂದು ಕಳವು ನಡೆದಿತ್ತು. ರಿಚರ್ಡ್ ಡಿಸೋಜಾ ಅವರ ಮನೆಯಲ್ಲಿ ಬಾಗಿಲಿನ ಬೀಗ ಮುರಿದು 31 ಗ್ರಾಂ ಚಿನ್ನಾಭರಣ, ₹70,000 ನಗದು ಹಾಗೂ ಶೇಷಾದ್ರಿ ಅವರ ಮನೆಯಲ್ಲಿ 28 ಗ್ರಾಂ ಚಿನ್ನಾಭರಣ, ಬೆಳ್ಳಿ ವಸ್ತುಗಳು, ₹ 30,000 ನಗದು ಕಳವು ಮಾಡಲಾಗಿತ್ತು.

ಡಿವೈಎಸ್ಪಿ ಅರವಿಂದ ಎನ್.ಕಲಗುಜ್ಜಿ, ಹೊಸನಗರ ಇನ್ಸ್ಪೆಕ್ಟರ್ ಗುರಣ್ಣ ಎಸ್.ಹೆಬ್ಬಾಳ್ ನೇತೃತ್ವದಲ್ಲಿ, ನಗರ ಪೊಲೀಸ್ ಠಾಣೆಯ ಪಿಎಸ್ಐ ಶಿವಾನಂದ ಕೋಳಿ, ಸಿಬ್ಬಂದಿ ಕುಮಾರ್ ಟಿ, ಶೇಖ್ ಅಮೀರ್ ಜಾನ್, ಕಿರಣ್ ಕುಮಾರ್, ವಿಶ್ವನಾಥ್ ಡಿ, ಪ್ರವೀಣ್ ಕುಮಾರ್, ಶಿವಕುಮಾರ ನಾಯ್ಕ, ರವಿಚಂದ್ರ, ಸುಜಯ ಕುಮಾರ್, ಪ್ರಜ್ವಲ್ ಡಿ.ಎಸ್, ಸಚಿನ್, ಚಾಲಕ ಶಶಿಧರ, ಶಿವಮೊಗ್ಗದ ಬೆರಳಚ್ಚು ವಿಭಾಗ ಮತ್ತು ಎ.ಎನ್.ಸಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.