ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯಗೆ ಕಿವಿ ಕೇಳಲ್ಲ, ಡಿ.ಕೆ. ಶಿವಕುಮಾರ್‌ಗೆ ಕಣ್ಣು ಕಾಣಲ್ಲ: ಈಶ್ವರಪ್ಪ

Published 29 ಫೆಬ್ರುವರಿ 2024, 12:23 IST
Last Updated 29 ಫೆಬ್ರುವರಿ 2024, 12:23 IST
ಅಕ್ಷರ ಗಾತ್ರ

ಶಿಕಾರಿಪುರ: 'ಪಾಕಿಸ್ತಾನ್ ಜಿಂದಾಬಾಂದ್‘ ಹೇಳಿದ ವ್ಯಕ್ತಿಗಳ ವಿರುದ್ಧ ಸರ್ಕಾರ ಬದುಕಿದ್ದರೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪಾಕಿಸ್ತಾನ್ ಜಿಂದಾಬಾಂದ್ ಎಂದು ಕೂಗಿರುವುದನ್ನು ಮಾಧ್ಯಮಗಳ ಮೂಲಕ ದೇಶ ನೋಡಿದೆ. ಒಬ್ಬ ಕಾಂಗ್ರೆಸಿಗನೂ ಕೂಡ ಪಾಕಿಸ್ತಾನ ಜಿಂದಾಬಾದ್ ಕೂಗಿದ್ದು ತಪ್ಪಿದೆ ಎಂದು ಹೇಳಿಲ್ಲ. ಸಿದ್ದರಾಮಯ್ಯ ಕಿವಿ ಕೇಳುವುದಿಲ್ಲ. ಡಿ.ಕೆ. ಶಿವಕುಮಾರ್‌ಗೆ ಕಣ್ಣು ಕಾಣುವುದಿಲ್ಲ ಎಂದು ಟೀಕಿಸಿದ ಅವರು, ಕಾಂಗ್ರೆಸ್ ನಾಯಕರೂ ಪಾಕಿಸ್ತಾನ ಪರನಾ, ರಾಷ್ಟ್ರ ದ್ರೋಹಿಗಳ ಪರನಾ ಎಂದು ಪ್ರಶ್ನಿಸಿದ ಅವರು, ಇದೇ ವಿಷಯವನ್ನು ಹಿಡಿದುಕೊಂಡು ಲೋಕಸಭೆ ಚುನಾವಣೆಗೆ ಹೋಗುತ್ತೇವೆ’ ಎಂದರು.

‘ರಾಜ್ಯದಲ್ಲಿ ಬಿಜೆಪಿ ರಾಷ್ಟ್ರದ್ರೋಹಿಗಳ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬಿಜೆಪಿ ರಾಷ್ಟ್ರೀಯತೆ ಹಾಗೂ ವಿಚಾರ ಸಿದ್ದಾಂತ ಇಟ್ಟುಕೊಂಡು ಚುನಾವಣೆ ಹೋಗುತ್ತದೆ. ಜನತೆ ರಾಷ್ಟ್ರದ್ರೋಹಿಗಳ ಪರ ಓಟು ಹಾಕುತ್ತಾರೋ ಹಾಗೂ ನಮ್ಮ ಸಿದ್ದಾಂತ ಪರ ಓಟು ಹಾಕುತ್ತಾರೋ ಕೇಳುತ್ತೇವೆ. ಸರ್ಕಾರ ಮುಸಲ್ಮಾನರಿಗೆ ಪಶುವೈದ್ಯಕೀಯ ಇಲಾಖೆ ಮಾತ್ರ ಕೊಡುವ ಬದಲು ಸರ್ಕಾರವನ್ನೇ ಮುಸಲ್ಮಾನರಿಗೆ ಕೊಡಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT