ಆ. 23ರಿಂದ 25ರವರೆಗೆ ಬೆಳಿಗ್ಗೆ 10.30ರಿಂದ ರಾತ್ರಿ 8 ಗಂಟೆವರೆಗೆ ನಡೆಯುವ ಪ್ರದರ್ಶನ ಮತ್ತು ಮಾರಾಟದಲ್ಲಿ ವಿಶೇಷ ವಿನ್ಯಾಸದ ಆಭರಣ ಕಂಡು ಬಂದವು. ತೋಳಬಂದಿ, ಸೊಂಟದ ಪಟ್ಟಿ, ನೆಕ್ಲೇಸ್, ಉಂಗುರ, ಬಳೆ, ಓಲೆ, ಮೂಗುತಿ, ಜುಮುಕಿ, ಪ್ಲಾಟಿನಂ ಆಭರಣ, ಲಕ್ಷ್ಮೀ, ವೆಂಕಟೇಶ, ರುದ್ರಾಕ್ಷಿ ಮಣಿ ಸೇರಿದಂತೆ ವಿವಿಧ ವಿನ್ಯಾಸದ ಡಾಲರ್, ಪ್ರೀತಿಯ ಸಂಕೇತದ ಡಾಲರ್ ಗಳು ಕಂಡು ಬಂದವು. ₹5 ಸಾವಿರದಿಂದ ₹50 ಲಕ್ಷಕ್ಕೂ ಅಧಿಕ ಮೌಲ್ಯದ ಆಭರಣ, ಅದರ ಜೊತೆಗೆ ಸುಗಂಧ ದ್ರವ್ಯಗಳು, ಮುತ್ತು, ರತ್ನ, ನೀಲ ಮಾಣಿಕ್ಯ, ವೈಢೂರ್ಯ ಇಲ್ಲಿವೆ.