ಶಿಕಾರಿಪುರ: ತಾಲ್ಲೂಕಿನ ಕಾಳೇನಹಳ್ಳಿಯ ಶಿವಯೋಗಾಶ್ರಮದಲ್ಲಿ ಭಾನುವಾರ ನಡೆದ ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳ 96ನೇ ವರ್ಷದ ಮತ್ತು ಲಿಂ.ರೇವಣಸಿದ್ಧ ಸ್ವಾಮೀಜಿ 5ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ರಥೋತ್ಸವ, ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಯಶಸ್ವಿಗೊಳಿಸಿದರು.

ಪುಣ್ಯಸ್ಮರಣೆ ಅಂಗವಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಲಿಂ.ರುದ್ರಮುನಿ ಶಿವಯೋಗಿಗಳು, ಲಿಂ.ರೇವಣಸಿದ್ಧ ಶಿವಯೋಗಿಗಳ ಕತುÈ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ನಡೆಯಿತು. ಬೆಳಗ್ಗೆ ವೈದ್ಯ ಶ್ರೀನಿವಾಸ್ ಅವರು ಷಟ್ಸ್ಥಳ ಧ್ವಜಾರೋಹಣ ನೆರವೇರಿಸಿದರು. ಅಂಬಾರಗೊಪ್ಪ, ಮದಗಹಾರನಹಳ್ಳಿ, ಕಾಳೇನಹಳ್ಳಿ, ಕೊಟ್ಟ, ಶಿಕಾರಿಪುರ ಸೇರಿ ಹಲವು ಕಡೆಯಿಂದ ಆಗಮಿಸಿದ್ದ ಭಕ್ತರ ಹಷೋದ್ಗಾರದ ನಡುವೆ ರಥೋತ್ಸವ ಕಾಳೇನಹಳ್ಳಿ ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಮದಗಹಾರನಹಳ್ಳಿ, ಗೊಗ್ಗ ಕಲಾವಿದರಿಂದ ವೀರಗಾಸೆ, ಕಪ್ಪನಹಳ್ಳಿ ಡೊಳ್ಳು ಕುಣಿತ ಪ್ರದರ್ಶನ ನಡೆಯಿತು.

ತಿಪ್ಪಾಯಿಕೊಪ್ಪ ಮೂಕೇಶ್ವರ ಮಠದ ಮಹಾಂತ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದ ಕೆಎಲ್ಇ, ಬಿಎಲ್ಡಿ ವಿದ್ಯಾಸಂಸ್ಥೆ, ವೀರಶೈವ ಮಹಾಸಭೆ ಸ್ಥಾಪನೆ ಸೇರಿದಂತೆ ನಾಡಿನ ನೂರಾರು ಮಠಗಳಿಗೆ ಪುನರುಜ್ಜೀವನ ನೀಡಿ ಅನ್ನ, ಅಕ್ಷರ ದಾಸೋಹದ ಮೂಲಕ ನಾಡು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಧರ್ಮ ರಕ್ಷಣೆ ಮಾತ್ರವಲ್ಲದೆ ಸಾಮಾಜಿಕ ಪಿಡುಗು ಹೋಗಲಾಡಿಸುವಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಲಿಂ.ಹಾನಗಲ್ಲ ಕುಮಾರ ಶಿವಯೋಗಿಗಳು ಈ ನಾಡಿನ ಮಹಾನ್ ಚೇತನ ಅವರ ತತ್ವ ಸಿದ್ಧಾಂತ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾಳೇನಹಳ್ಳಿ ಗ್ರಾಮದ ಭಕ್ತರಿಂದ ಕುಮದ್ವತಿ ನದಿಯಲ್ಲಿ ಸಂಜೆ ತೆಪ್ಪೋತ್ಸವ ಕಾರ್ಯಕ್ರಮ ನಡೆಯಿತು. ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ದೊಡ್ಡಪೇಟೆ ಭಕ್ತರು ಪಾದಯಾತ್ರೆ ಮೂಲಕ ಶ್ರೀಮಠಕ್ಕೆ ತಲುಪಿ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಶಿಕಾರಿಪುರ ತಾಲ್ಲೂಕು ಕಾಳೇನಹಳ್ಳಿ ಶಿವಯೋಗಾಶ್ರಮದ ರಥೋತ್ಸವ ಅಂಗವಾಗಿ ಲಿಂ.ರುದ್ರಮುನಿ ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.

ಶಿಕಾರಿಪುರ ತಾಲ್ಲೂಕು ಕಾಳೇನಹಳ್ಳಿ ಶಿವಯೋಗಾಶ್ರಮದ ರಥೋತ್ಸವ ಭಾನುವಾರ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.