ಭದ್ರಾವತಿ: ಸಮೀಪದ ಕುವೆಂಪು ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಈಚೆಗೆ ‘ವ್ಯೂ ಅಂಡ್ ಚ್ಯೂ’ ಎಂಬ ವ್ಯಾಪಾರಾತ್ಮಕ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಪಠ್ಯಸಾಮಗ್ರಿಗಳನ್ನು ಮತ್ತು ಆಹಾರ ವಸ್ತುಗಳನ್ನು ಮಾರಾಟ ಮಾಡಲಾಯಿತು. ಸಾಮಾಜಿಕ ಹೊಣೆಗಾರಿಕೆಯ ಭಾವನೆಗೆ ಅನುಗುಣವಾಗಿ, ವಿದ್ಯಾರ್ಥಿಗಳು ಭಾರತೀಯ ಸೇನೆಗೆ ಸಂಬಂಧಿಸಿದ ಸ್ಟ್ಯಾಂಪ್ಗಳನ್ನು ಮಾರಾಟ ಮಾಡಿ ಸೇನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಒಟ್ಟು ₹ 10,470 ಲಾಭ ಗಳಿಸಿದರು. ಭಾರತೀಯ ಸೇನೆಯ ಬದ್ಧತೆ ಮತ್ತು ತ್ಯಾಗದ ಸಂಕೇತವಾಗಿ ಈ ಮೊತ್ತವನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆಯಾಗಿ ನೀಡಲಾಯಿತು.

ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ವ್ಯಾಪಾರ ಹಾಗೂ ಮಾರುಕಟ್ಟೆ ಕ್ಷೇತ್ರದಲ್ಲಿ ಅನುಭವ ದೊರಕಿದಷ್ಟೇ ಅಲ್ಲದೆ, ಸಮಾಜದ ಪ್ರತಿ ಜವಾಬ್ದಾರಿ ಹಾಗೂ ದೇಶಭಕ್ತಿಯ ಮಹತ್ವವನ್ನು ಸಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.