ವಾಡಿಕೆಯಂತೆ ಜೂನ್‍ನಲ್ಲಿ ರಾಜ್ಯ ಪ್ರವೇಶಿಸಬೇಕಿದ್ದ ಮುಂಗಾರು ವಿಳಂಬವಾಗಿದೆ. ಪರಿಣಾಮವಾಗಿ ತೋಟಗಳಲ್ಲಿ ಅಡಿಕೆ ತೆನೆ ಹರಳು ಉದುರುತ್ತಿವೆ. ರೈತರು ಬಿತ್ತನೆಗಾಗಿ ಭೂಮಿಯನ್ನು ಹಸನು ಮಾಡಿಕೊಂಡು ಆಕಾಶದತ್ತ ಮುಖಮಾಡಿ ನಿಂತಿದ್ದಾರೆ.
ಸಾರ್ವಜನಿಕರಿಗೆ ತೊಂದರೆ ಆಗದಂತೆ ಕೆಲವು ವಾರ್ಡ್‍ಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ₹ 25 ಲಕ್ಷಕ್ಕೂ ಹೆಚ್ಚು ನೀರಿನ ಕರ ಬಾಕಿ ಇದ್ದು ಜನರು ಅದನ್ನು ತಪ್ಪದೇ ಪಾವತಿಸಬೇಕು.