ಶಿವಮೊಗ್ಗ: ಶರಾವತಿಕಣಿವೆಯತಲಕಳಲೆಜಲಾಶಯದಎರಡು ನಡುಗಡ್ಡೆಗಳಲ್ಲಿ ‘ಮಂಕಿ ಪಾರ್ಕ್’ಸ್ಥಾಪಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು, ಆಗಸ್ಟ್ ಮೊದಲ ವಾರದಿಂದಲೇ ಮಂಗಗಳನ್ನು ಸೆರೆಹಿಡಿಯಲುಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.

ಜೋಗ ಜಲಪಾತ ತಪ್ಪಲಿನ ಕಾರ್ಗಲ್ ಪಟ್ಟಣದಿಂದ 8 ಕಿ.ಮೀ. ಅಂತರದಲ್ಲಿ ಶರಾವತಿ ವಿದ್ಯುದಾಗರಕ್ಕೆ ನೀರು ಪೂರೈಸಲು ಸಮತೋಲಿತ ಜಲಾಶಯ ನಿರ್ಮಿಸಲಾಗಿದೆ. ಈ ಜಲಾಶಯದ ಒಳಗೆ ಮೂರು ಕಿ.ಮೀ. ಅಂತರ
ದಲ್ಲಿ 10ರಿಂದ 15 ಹೆಕ್ಟೇರ್ ವಿಸ್ತಾರದ ದಟ್ಟ ಕಾನನವಿರುವ ಎರಡು ನಡುಗಡ್ಡೆಗಳಿವೆ. ಸೆರೆಹಿಡಿದ ಮಂಗಗಳನ್ನು ಅಲ್ಲಿಗೆ ಬಿಡಲಾಗುತ್ತದೆ.

ಬಿಡುವ ಮೊದಲು ಸಂತಾನಶಕ್ತಿ ಹರಣ: ಸೆರೆಹಿಡಿದ ಮಂಗಗಳನ್ನು ಮಂಕಿ ಪಾರ್ಕ್ಗೆ ಬಿಡುವ ಮೊದಲು ಅವುಗಳಿಗೆಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ತಲಾ 30 ಮಂಗಗಳನ್ನು ಏಕ
ಕಾಲಕ್ಕೆ ಸಾಗಿಸಬಹುದಾದ ಮೂರು ಪಂಜರಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಅರಣ್ಯ ಸಿಬ್ಬಂದಿ ವ್ಯಾನ್ಗಳಲ್ಲಿ ತುಂಬಿಕೊಂಡು ಜಲಾಶಯ ತಲುಪಿದ ನಂತರ ಅಲ್ಲಿಂದ ಬೋಟ್ ಮೂಲಕ ನಡುಗಡ್ಡೆಗೆ ಸಾಗಿಸಲಾಗುತ್ತದೆ. ಮೊದಲ ಹಂತದ ಈ ಪ್ರಾಯೋಗಿಕ ಯೋಜನೆಯಲ್ಲಿ 500 ಮಂಗಗಳನ್ನು ಸಂರಕ್ಷಿಸುವ ಗುರಿಇದೆ.ಕಾಲಕಾಲಕ್ಕೆ ಸಿಗುವ ಹಣ್ಣು
ಗಳನ್ನು ನಿತ್ಯವೂ ಅವುಗಳಿಗೆ ಪೂರೈಸಲಾಗುತ್ತದೆ. ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ‘ಮಂಕಿ ಪಾರ್ಕ್’ಗಾಗಿಯೇ ₹ 6.25 ಕೋಟಿ ಮೀಸಲಿಟ್ಟಿತ್ತು.

ಹೊಸನಗರ ತಾಲ್ಲೂಕು ನಿಟ್ಟೂರು–ನಾಗೋಡಿ ಸರ್ವೆ ನಂಬರ್ 305ರಲ್ಲಿನ 400 ಎಕರೆ ಅರಣ್ಯದಲ್ಲಿ ‘ಮಂಕಿ ಪಾರ್ಕ್’ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಆದರೆ, ಅಲ್ಲಿನ ಭೂ ಮಾಫಿಯಾ,ಬಗರ್ಹುಕುಂ ಸಾಗುವಳಿದಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅರಣ್ಯ ಇಲಾಖೆ ತಲಕಳಲೆ ದ್ವೀಪ ಆಯ್ದುಕೊಂಡು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿತ್ತು.

ದ್ವೀಪದಲ್ಲಿ ಪಾರ್ಕ್ ನಿರ್ಮಾಣ ವೆಚ್ಚದಾಯಕ. ಅಲ್ಲಿ ಭಾರಿ ಸಂಖ್ಯೆಯ ಮೊಸಳೆಗಳಿದ್ದು, ಮಂಗಗಳ ಸಂತತಿ
ಯನ್ನೇ ನಾಶ ಮಾಡ ಬಹುದುಎನ್ನುವುದುಪರಿಸರವಾದಿಗಳ ವಾದ.

ಮಂಕಿ ಪಾರ್ಕ್ ಆರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಮುಂದಿನ ವಾರದಿಂದ ಮಂಗಗಳನ್ನು ಸೆರೆಹಿಡಿಯುವ ಪ್ರಕ್ರಿಯೆ ಆರಂಭಿಸಲಾಗುವುದು
-ರವಿಶಂಕರ್,ಮುಖ್ಯ ಅರಣ್ಯಸಂರಕ್ಷಣಾಧಿಕಾರಿ, ಶಿವಮೊಗ್ಗ ವೃತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.