ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗನಮಕ್ಕಿಗೆ ಒಂದೇ ದಿನ 3.75 ಅಡಿ ನೀರು: ಮಂಟಪ ಬಹುತೇಕ ಮುಳುಗಡೆ

ಹೊಸನಗರ ಭಾರೀ ಮಳೆ: ಲಿಂಗನಮಕ್ಕಿಗೆ ಒಂದೇ ದಿನ 3.75 ಅಡಿ ನೀರು
Last Updated 8 ಜುಲೈ 2022, 5:33 IST
ಅಕ್ಷರ ಗಾತ್ರ

ಶಿವಮೊಗ್ಗ: ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ತುಂಗಾ ಜಲಾಶಯ ಭರ್ತಿಯಾಗಿದೆ. ಪ್ರತಿ ಗಂಟೆಗೂ ಒಳಹರಿವಿನ ಪ್ರಮಾಣ ಹೆಚ್ಚುತ್ತಿರುವ ಕಾರಣ ಜಲಾಶಯದಿಂದ ನದಿಗೆ ಗುರುವಾರ 52,525 ಕ್ಯುಸೆಕ್ ನೀರು ಹರಿಯಬಿಡಲಾಯಿತು.

ಇದರಿಂದ ತುಂಗಾ ನದಿಯಲ್ಲಿ ನೀರಿನಮಟ್ಟ ಹೆಚ್ಚಳವಾಗಿದ್ದು, ಶಿವಮೊಗ್ಗ ನಗರ ಬಳಸಿಕೊಂಡು ಹೋಗಿರುವ ನದಿಯ ದಡದಲ್ಲಿರುವ ಕೋರ್ಪಲಯ್ಯನ ಛತ್ರ ಮಂಟಪ ಬಹುತೇಕ ಮುಳುಗಡೆ ಆಗಿದೆ. ಮಂಟಪದ ತುದಿಯ ಭಾಗ ಮಾತ್ರ ಕಾಣುತ್ತಿದ್ದು, ಭೋರ್ಗರೆಯುತ್ತಿರುವ ತುಂಗೆಯನ್ನು ಕಣ್ತುಂಬಿಕೊಳ್ಳಲು ನಗರದ ಜನರು ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ನದಿಯತ್ತ ಬಂದರು.

ಹೆಚ್ಚಿನ ಸಂಖ್ಯೆಯ ಜನರು ಮಂಟಪದ ಬಳಿಗೆ ತೆರಳುತ್ತಿದ್ದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಅದರ ಮೆಟ್ಟಿಲುಗಳ ಮುಂದೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಮತ್ತೊಂದು ಕಡೆ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವುದರಿಂದ ಇಡೀ ಪ್ರದೇಶ ಕೆಸರುಮಯವಾಗಿದೆ.

ಲಿಂಗನಮಕ್ಕಿಗೆ ಒಂದೇ ದಿನ 3.75 ಅಡಿ ನೀರು: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 47.26 ಸೆಂ.ಮೀ ಮಳೆಯಾಗಿದೆ. ಜುಲೈ ತಿಂಗಳ ವಾಡಿಕೆ ಮಳೆಯ ಸರಾಸರಿ ಪ್ರಮಾಣ 76.49 ಸೆಂ.ಮೀ ಇದ್ದು, ಇಲ್ಲಿಯವರೆಗೆ ಸರಾಸರಿ 23.62 ಸೆಂ.ಮೀ ಮಳೆ ದಾಖಲಾಗಿದೆ.

ರಾಜ್ಯದ ಪ್ರಮುಖ ವಿದ್ಯುದಾಗಾರ ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಶರಾವತಿ ನದಿಯ ಜಲಾನಯನ ಪ್ರದೇಶವಾದ ಹೊಸನಗರ ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಭರ್ಜರಿ ಮಳೆಯಾಗುತ್ತಿದೆ. ಇದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ 3.75 ಅಡಿ ನೀರು ಹರಿದು
ಬಂದಿದೆ.

ಕಳೆದ 24 ಗಂಟೆಯಲ್ಲಿ ಹೊಸನಗರದಲ್ಲಿ 31.52 ಸೆಂ.ಮೀ, ಸಾವೆಹಕ್ಲು 27.6 ಸೆಂ.ಮೀ, ಹುಲಿಕಲ್ 25.6, ಚಕ್ರಾ ನಗರ 20.6, ಬಿದನೂರು ನಗರ 19.4, ಯಡೂರು 19.2, ಮಾಣಿ 17.2, ಮಾಸ್ತಿಕಟ್ಟೆ 16.4, ಲಿಂಗನಮಕ್ಕಿ 16.32, ಹುಂಚ 10.4 ಸೆಂ.ಮೀ, ಅರಸಾಳು 7.16, ರಿಪ್ಪನ್‌ಪೇಟೆಯಲ್ಲಿ 5.42 ಸೆಂ.ಮೀ. ಮಳೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT