ಗಸ್ತು ವೇಳೆ ವಿಪರೀತ ಚುರುಕು ಹಾಗೂ ಜಾಗೃತ ಸ್ಥಿತಿಯ ವರ್ತನೆ ತೋರುವ ಮುಧೋಳ ತಳಿಯ ಶ್ವಾನಗಳು ಚಂದ್ರಕಲಾ ಅರಣ್ಯ ಪ್ರದೇಶದಲ್ಲಿ ಕಳ್ಳಬೇಟೆಗಾರರಿಗೆ ಹಾಗೂ ಮರಗಳ್ಳರಿಗೆ ಸಿಂಹಸ್ವಪ್ನವಾಗಿವೆ.
– ರೇವಣಸಿದ್ದಯ್ಯ ಹಿರೇಮಠ, ಶಿಕಾರಿಪುರ ವಲಯ ಅರಣ್ಯಾಧಿಕಾರಿ
ಚಂದ್ರಕಲಾ ಅರಣ್ಯದಲ್ಲಿ ಗಸ್ತು ಕಾರ್ಯಕ್ಕೆ ಮುಧೋಳ ತಳಿ ಶ್ವಾನಗಳ ಬಳಕೆಯಿಂದ ಅರಣ್ಯ ಸಿಬ್ಬಂದಿಗೆ ಹೆಚ್ಚುವರಿ ಶಕ್ತಿ ಕೊಟ್ಟಂತಾಗಿದೆ. ಇದರಿಂದ ಶ್ರೀಗಂಧದ ಮರಗಳ ಸಂರಕ್ಷಣೆ ಕಟ್ಟುನಿಟ್ಟಾಗಿ ಆಗುತ್ತಿದೆ.