ಶಿವಮೊಗ್ಗ: ಜಿಲ್ಲೆಯ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿಗೆ ಮೂರನೇ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ಸೆ.13ರಂದು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಂಜುನಾಥ ನಾಯಕ್ ಹೇಳಿದರು.

ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ವೈವಾಹಿಕ ವಿವಾದ, ಅಪಘಾತಕ್ಕೆ ಸಂಬಂಧಿಸಿದ ಪರಿಹಾರದ ವ್ಯಾಜ್ಯಗಳು, ಕೌಟುಂಬಿಕ ದೌರ್ಜನ್ಯ ಪ್ರಕರಣ, ಚೆಕ್ ಅಮಾನ್ಯ ಪ್ರಕರಣ, ವಾಣಿಜ್ಯ ವಿವಾದ, ವೇತನ ಮತ್ತು ಸೇವೆಗೆ ಸಂಬಂಧಿಸಿದ ವ್ಯಾಜ್ಯಗಳು, ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣ, ಗ್ರಾಹಕರ ವೇದಿಕೆಯ ಪ್ರಕರಣ, ಸಾಲದ ಪ್ರಕರಣ, ಪಾಲು ವಿಭಾಗದ ದಾವೆಗಳು, ಸ್ಥಿರಾಸ್ತಿ ಸ್ವಾಧೀನ, ಭೂಸ್ವಾಧೀನದ ಪ್ರಕರಣ ಮತ್ತು ಇತರೆ ಸಿವಿಲ್ ಪ್ರಕರಣಗಳ ರಾಜೀ ಸಂಧಾನಕ್ಕೆ ಅವಕಾಶವಿದೆ.

ಉಭಯ ಪಕ್ಷಗಾರರ ಉಪಸ್ಥಿತಿಯಲ್ಲಿ ನ್ಯಾಯಾಧೀಶರು ಮತ್ತು ನ್ಯಾಯಿಕೇತರ ಸಂಧಾನಕಾರರು ರಾಜೀ ಸಂಧಾನದ ಪ್ರಕ್ರಿಯೆಯನ್ನು ಕೈಗೊಂಡು ಪಕ್ಷಗಾರರು ವಿವಾದವನ್ನು ಇತ್ಯರ್ಥಪಡಿಸಿಕೊಂಡರೆ ಅದರಂತೆ ಅಂತಿಮ ಆದೇಶವನ್ನು ಅದೇ ದಿನ ನೀಡುವ ಅವಕಾಶ ಸಾರ್ವಜನಿಕರು ಮತ್ತು ಪಕ್ಷಗಾರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಳೆದ ಜುಲೈ 12ರಂದು ಕೈಗೊಳ್ಳಲಾದ ಈ ವರ್ಷದ 2ನೇ ರಾಪ್ಟ್ರೀಯ ಲೋಕ್ ಅದಾಲತ್ನಲ್ಲಿ ವಿಚಾರಣೆಗೆ ಬಾಕಿ ಇದ್ದ 14,225 ಪ್ರಕರಣಗಳು ರಾಜೀ ಸಂಧಾನದ ಮೂಲಕ ಕೊನೆಗೊಂಡಿವೆ. ಅವುಗಳ ಮೂಲಕ ಪಕ್ಷಗಾರರು ಒಟ್ಟು ₹ 30,50,15,387 ಮೊತ್ತದ ಪರಿಹಾರ ಒಳಗೊಂಡ ವಿವಾದಗಳನ್ನು ರಾಜೀ ಮಾಡಿಕೊಂಡಿದ್ದಾರೆ. ಅದೇ ಸಂದರ್ಭದಲ್ಲಿ ಒಟ್ಟು 1,44,825 ವ್ಯಾಜ್ಯ ಪೂರ್ವ ಪ್ರಕರಣಗಳು ಕೊನೆಗೊಂಡಿವೆ. ಅವುಗಳ ಮೂಲಕ ಒಟ್ಟು ₹75,40,80,831 ಮೊತ್ತದ ಪರಿಹಾರ ಒಳಗೊಂಡ ವಿವಾದಗಳನ್ನು ರಾಜೀ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

90 ದಿನಗಳ ಮಧ್ಯಸ್ಥಿಕೆ ಅಭಿಯಾನ:

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಶಿವಮೊಗ್ಗ ಜಿಲ್ಲೆಯಲ್ಲಿನ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ವೈವಾಹಿಕ ಬದುಕಿನ ವ್ಯಾಜ್ಯಗಳು, ಅಪಘಾತಕ್ಕೆ ಸಂಬಂಧಿಸಿದ ಪರಿಹಾರದ ವ್ಯಾಜ್ಯಗಳು, ಕೌಟುಂಬಿಕ ದೌರ್ಜನ್ಯ ಪ್ರಕರಣ, ಚೆಕ್ ಅಮಾನ್ಯ ಪ್ರಕರಣ, ವಾಣಿಜ್ಯ ವಿವಾದದ ದಾವೆಗಳು, ವೇತನ ಮತ್ತು ಸೇವೆಗೆ ಸಂಬಂಧಿಸಿದ ವ್ಯಾಜ್ಯಗಳು, ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣ, ಗ್ರಾಹಕರ ವೇದಿಕೆ ಪ್ರಕರಣ, ಸಾಲದ ಪ್ರಕರಣ, ಪಾಲು ವಿಭಾಗದ ದಾವೆಗಳು, ಸ್ಥಿರ ಆಸ್ತಿ ಸ್ವಾಧೀನದ ದಾವೆಗಳು, ಭೂಸ್ವಾಧೀನದ ಪ್ರಕರಣ ಮತ್ತು ಇತರೆ ಸಿವಿಲ್ ಪ್ರಕರಣಗಳ ರಾಜೀ ಸಂಧಾನಕ್ಕಾಗಿ 90 ದಿನಗಳ ಮಧ್ಯಸ್ಥಿಕೆ ಅಭಿಯಾನ ಜುಲೈ 1ರಿಂದ ಸೆಪ್ಟೆಂಬರ್ 30ರ ವರೆಗೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು.

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಪಕ್ಷಗಾರರು ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಶೀಘ್ರವಾಗಿ ಮತ್ತು ತಮಗೆ ಸೂಕ್ತ ಎನ್ನಿಸುವ ನ್ಯಾಯಯುತವಾದ ಪರಿಹಾರಗಳ ಪಡೆದುಕೊಳ್ಳಲು ನ್ಯಾಯಾಲಯಗಳಲ್ಲಿ ಅಂತಹ ಪ್ರಕರಣಗಳನ್ನು ಮಧ್ಯಸ್ಥಿಕೆಗೆ ನೇಮಿಸಲು ತಾವಾಗಲೀ ಅಥವಾ ವಕೀಲರ ಮೂಲಕ ಮನವಿ ಮಾಡಿಕೊಂಡು ಅದರಂತೆ ಮಧ್ಯಸ್ಥಿಕೆ ಪ್ರಕರಣಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲೆಯ ಎಲ್ಲಾ ಕಾನೂನು ಸೇವಾ ಸಮಿತಿಯಲ್ಲಿ ಮಧ್ಯಸ್ಥಿಕೆದಾರರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ವಕೀಲರ ಸಹಾಯದಿಂದ ನ್ಯಾಯ ಪಡೆದುಕೊಳ್ಳಬಹುದು. ಈವರೆಗೆ 1420 ಪ್ರಕರಣಗಳನ್ನು ಮಧ್ಯಸ್ಥಿಕೆಗಾಗಿ ಗುರುತಿಸಿದ್ದು, 112 ಪ್ರಕರಣಗಳನ್ನು ಯಶಸ್ವಿಯಾಗಿ ರಾಜೀ ಮೂಲಕ ಬಗೆಹರಿಸಲಾಗಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಹಾಜರಿದ್ದರು.

ಕಾಯಂ ಲೋಕ್ ಅದಾಲತ್ ಜಾಗೃತಿ ಅಭಿಯಾನ:

ಬ್ಯಾಂಕ್ ವಿಮಾ ಕಂಪನಿ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಾರ್ವಜನಿಕರಲ್ಲಿ ಕಾಯಂ ಲೋಕ್ ಅದಾಲತ್ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಂಜುನಾಥ ನಾಯಕ್ ಹೇಳಿದರು. ಕಾಯಂ ಲೋಕ್ ಅದಾಲತ್ ಒಂದು ವಿಶೇಷ ನ್ಯಾಯಾಲಯವಾಗಿದೆ. ಪ್ರಕರಣಗಳ ರಾಜೀ ಸಂಧಾನವೇ ಇಲ್ಲಿ ಮೊದಲ ಆದ್ಯತೆ. ರಾಜ್ಯದ 6 ಜಿಲ್ಲೆಗಳಲ್ಲಿ ಕಾಯಂ ಲೋಕ್ ಅದಾಲತ್ ಕಚೇರಿ ಹೊಂದಿದೆ. ಶಿವಮೊಗ್ಗ ಜಿಲ್ಲೆಯು ಮಂಗಳೂರಿನ ವ್ಯಾಪ್ತಿಗೆ ಬರುತ್ತದೆ. ಮುಂದಿನ ದಿನಗಳಲ್ಲಿ ಮಂಗಳೂರಿನ ಪೀಠವು ನಿಯಮಿತವಾಗಿ ಶಿವಮೊಗ್ಗಕ್ಕೆ ಬಂದು ಅದಾಲತ್ ನಡೆಸಲಿದೆ ಎಂದು ಮಾಹಿತಿ ನೀಡಿದರು. ಕಾಯಂ ಜನತಾ ನ್ಯಾಯಾಲಯದಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಅಧ್ಯಕ್ಷರಾಗಿ ಹಾಗೂ ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿದ ಇಬ್ಬರು ಸದಸ್ಯರು ಕರ್ತವ್ಯ ನಿರ್ವಹಿಸುತ್ತಾರೆ. ₹1 ಕೋಟಿ ಮೌಲ್ಯದ ವ್ಯಾಜ್ಯಗಳನ್ನು ಅಥವಾ ಹಣಕಾಸಿನ ವ್ಯವಹಾರ ಪ್ರಕರಣಗಳನ್ನು ದಾಖಲಿಸಬಹುದು. ಅರ್ಜಿದಾರರಿಗೆ ಯಾವುದೇ ಆದಾಯ ಮಿತಿ ಇರುವುದಿಲ್ಲ ಹಾಗೂ ನ್ಯಾಯಾಲಯದ ಶುಲ್ಕವಿರುವುದಿಲ್ಲ. ಕಾಯಂ ಜನತಾ ನ್ಯಾಯಾಲಯದಲ್ಲಿ ನೀಡಿದ ತೀರ್ಪು ಅವಾರ್ಡನ್ನು ಯಾವುದೇ ಸಿವಿಲ್ ಅಥವಾ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವಿಲ್ಲ ಎಂದರು.

ಉಚಿತ ಕಾನೂನು ಸಹಾಯವಾಣಿ; 15100 ಕರೆ ಮಾಡಿ..

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ಸಾರ್ವಜನಿಕರಿಗೆ ಉಚಿತವಾಗಿ ಕಾನೂನು ಸಲಹೆ ನೀಡಲು ಸಹಾಯವಾಣಿ ಸಂಖ್ಯೆ 15100 ಆರಂಭಿಸಲಾಗಿದೆ. ತಲಾ ಒಬ್ಬ ಮಹಿಳೆ ಹಾಗೂ ಪುರುಷ ವಕೀಲರು ಕರೆಗಳನ್ನು ಸ್ವೀಕರಿಸಿ ಸಾರ್ವಜನಿಕರ ಕುಂದು ಕೊರತೆಗೆ ಕಾನೂನು ಸಲಹೆ ನೀಡಲಿದ್ದಾರೆ ಎಂದು ಮಂಜುನಾಥ ನಾಯಕ್ ತಿಳಿಸಿದರು.

ದಂಡ ಪಾವತಿಗೆ ಎಂಟು ದಿನ ಮಾತ್ರ ಬಾಕಿ..

ಬಾಕಿ ಇರುವ ಸಂಚಾರ ಇ-ಚಲನ್ ಪ್ರಕರಣಗಳ ದಂಡದ ಮೇಲೆ ಶೇ.50 ರಿಯಾಯ್ತಿ ಅವಕಾಶ ಇನ್ನು 8 ದಿನ (ಸೆ.12) ಮಾತ್ರ ಇದ್ದು ಸರ್ಕಾರ ಕೊಟ್ಟಿರುವ ಈ ಅವಕಾಶವನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಂಜುನಾಥ ನಾಯಕ್ ಹೇಳಿದರು. ಪೊಲೀಸ್ ಇಲಾಖೆಯಿಂದ ಆ.23 ರಿಂದ ಸೆ.2 ರವರೆಗೆ ಈ ರಿಯಾಯಿತಿಯಡಿ ಒಟ್ಟು 15465 ಪ್ರಕರಣಗಳ ಮುಕ್ತಾಯ ಮಾಡಿದ್ದು ₹6322750 ದಂಡ ಸಂಗ್ರಹವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.