ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಅವಧಿಯಲ್ಲೂ ನಿಲ್ಲದ ರಸ್ತೆ ಅಪಘಾತ

ಎರಡು ತಿಂಗಳ ಅವಧಿಯಲ್ಲಿ 158 ಪ್ರಕರಣ ದಾಖಲು, 31 ಜನರ ಸಾವು
Last Updated 4 ಜುಲೈ 2020, 4:32 IST
ಅಕ್ಷರ ಗಾತ್ರ

ಶಿವಮೊಗ್ಗ: ಲಾಕ್‌ಡೌನ್ ಜಾರಿ ಬಳಿಕ ಜಿಲ್ಲೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧವಿದ್ದರೂ, ಈ ಅವಧಿಯಲ್ಲಿ 150ಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿವೆ.31 ಜನರು ಮೃತಪಟ್ಟಿದ್ದಾರೆ.

ಮಾರ್ಚ್ ತಿಂಗಳಲ್ಲಿ ಲಾಕ್‌ಡೌನ್ ಜಾರಿಯಾದ ನಂತರ ಶೇ 90ರಷ್ಟುವಾಹನಗಳು ರಸ್ತೆಗೆ ಇಳಿದಿರಲಿಲ್ಲ. ರಸ್ತೆಗಳಲ್ಲಿ ಅವಶ್ಯಕವಾಗಿ ಓಡಾಡುವ ಸಾರ್ವಜನಿಕರಿಗೂಪೊಲೀಸರು ಲಾಠಿ ರುಚಿ ತೋರಿಸಿದ್ದರು. ಹೀಗಿದ್ದರೂ ಈ ಸಮಯದಲ್ಲಿ ರಸ್ತೆ ಅಪಘಾತಗಳು ನಿಂತಿರಲಿಲ್ಲ.

ಏಪ್ರಿಲ್ ತಿಂಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಯಲ್ಲಿತ್ತು. ಅಗತ್ಯ ಸೇವೆಗಳು, ತುರ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿತ್ತು. ಏಪ್ರಿಲ್, ಮೇ ಎರಡು ತಿಂಗಳಲ್ಲಿ 158 ರಸ್ತೆ ಅಪಘಾತಗಳು ಜಿಲ್ಲೆಯಲ್ಲಿ ಸಂಭವಿಸಿವೆ. ಅವುಗಳಲ್ಲಿ 29 ಮಾರಾಣಾಂತಿಕ ಅಪಘಾತಗಳು. ಈ ಅಪಘಾತಗಳಲ್ಲಿ 31 ಜನ ಮೃತಪಟ್ಟಿದ್ದಾರೆ. 173 ಜನ ಗಾಯ
ಗೊಂಡಿದ್ದಾರೆ. ವಿಪರ್ಯಾಸ
ವೆಂದರೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೊರೊನಾದಿಂದ ಮೂವರು ಮೃತಪಟ್ಟಿದ್ದಾರೆ. ಕೊರೊನಾ ಹರಡುವಿಕೆ ತಡೆಯುವ ಸಲುವಾಗಿ ನಿರ್ಬಂಧ ಹೇರಿದ್ದ ಸಮಯದಲ್ಲೇ 10 ಪಟ್ಟು ಹೆಚ್ಚು ಜನ ಅಪಘಾತದಿಂದ ಜೀವ ಕಳೆದುಕೊಂಡಿದ್ದಾರೆ ಎಂದು ಅಂಕಿ–ಅಂಶಗಳು ಹೇಳುತ್ತವೆ.

ಅಪಘಾತ ಪ್ರಕರಣ ಗಳು ಹೆಚ್ಚಾಗಿ ಗ್ರಾಮೀಣ ರಸ್ತೆಗಳಲ್ಲಿ ನಡೆದಿವೆ. ಲಾಕ್‌ಡೌನ್‌ ವೇಳೆ ರಸ್ತೆಗಳು ನಿರ್ಜನವಾಗಿದ್ದವು. ವಾಹನ ಸವಾರರು ವೇಗ ಮತ್ತು ಅಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸಿದ್ದ ಪರಿಣಾಮ ಇಷ್ಟೊಂದು ಪ್ರಮಾಣ ಅಪಘಾತಗಳುಸಂಭವಿಸಿರುವುದು ಪೊಲೀಸರ ಪ್ರಾಥಮಿಕ ವರದಿಗಳಿಂದ ದೃಢಪಟ್ಟಿದೆ.

ಸಾಮಾನ್ಯ ದಿನಗಳಲ್ಲಿ ಹೆದ್ದಾರಿಗಳು ವಾಹನ ಸವಾರರ ಪಾಲಿಗೆ ಮೃತ್ಯುಕೂಪಗಳಾಗಿ ಪರಿಣಮಿಸಿವೆ. ಜನವರಿಯಿಂದ
ಮಾರ್ಚ್‌ವರೆಗೆ82 ಜನರು ಅಪಘಾತದಿಂದ ಮೃತಪಟ್ಟಿ ದ್ದಾರೆ. ಲಾಕ್‌ಡೌನ್‌ ಸಡಿಲಿಕೆ ಬಳಿಕ ಜೂನ್‌ ತಿಂಗಳಲ್ಲಿ 94 ಪ್ರಕರಣಗಳು ವರದಿಯಾಗಿವೆ.16 ಜನ ಪ್ರಾಣ ಕಳೆದುಕೊಂಡಿದ್ದಾರೆ.

‘ಸಾಮಾನ್ಯ ದಿನ ಗಳಿಗೆ ಹೋಲಿಸಿದರೆ ಲಾಕ್‌ಡೌನ್‌ ಅವಧಿಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆ ಇದೆ. ಆದರೆ, ವಾಹನ ದಟ್ಟಣೆ ಇಲ್ಲದ ಸಮಯದಲ್ಲೂ ಅಪಘಾತಗಳು ನಡೆದಿರುವುದು ಆಘಾತಕಾರಿ. ಬೈಕ್‌ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಸಂಚಾರ ಸುರಕ್ಷತೆಗೆ ಗಮನ ನೀಡಬೇಕು’ ಎನ್ನುತ್ತಾರೆ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಎಚ್‌.ಟಿ. ಶೇಖರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT