ಶಿವಮೊಗ್ಗ: ‘ಒಂದು ದೇಶ, ಒಂದು ಚುನಾವಣೆ’ ಎಂದರೆ, ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನೂ ಒಂದೇ ಸಮಯದಲ್ಲಿ ನಡೆಸುವುದು. ಇದು ಒಂದು ಸಮಗ್ರ, ಸಂಘಟಿತ ಮತದಾನ ಕ್ರಮ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.

ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಚಂದನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಒಂದು ದೇಶ, ಒಂದು ಚುನಾವಣೆ’ ಕುರಿತು ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ನಿರಂತರ ಚುನಾವಣೆಗಳಿಂದ ಆಗುವ ಹಣ ಮತ್ತು ಸಮಯದ ನಷ್ಟ ತಪ್ಪಿಸುವುದು, ಸರ್ಕಾರದ ಕಾರ್ಯಕ್ಷಮತೆ ಹೆಚ್ಚಿಸುವುದು, ಜನತೆಗೆ ಸ್ಪಷ್ಟತೆ ಮತ್ತು ದೃಢತೆಯುಳ್ಳ ಆಡಳಿತ ನೀಡುವುದು, ಚುನಾವಣೆ ನೀತಿ ಸಂಹಿತೆಯಿಂದ ಪ್ರಭಾವಿತರಾಗುವ ಸರ್ಕಾರದ ನಿರ್ಣಯಗಳ ತಪ್ಪಿಸುವುದು ಇದರಿಂದ ಸಾಧ್ಯವಾಗಲಿದೆ’ ಎಂದರು.

‘ಪ್ರತಿ ಚುನಾವಣೆಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಆಗುತ್ತದೆ. ಒಂದೇ ಚುನಾವಣೆಯಾದರೆ ಈ ಹಣ ಉಳಿಯುತ್ತದೆ. ಸಮಯದ ಉಳಿತಾಯ ಬೃಹತ್ ಮಾನವ ಸಂಪನ್ಮೂಲ ಮತ್ತು ಶಕ್ತಿ ಒಟ್ಟಿಗೆ ಬಳಸಬಹುದು. ಆಡಳಿತದಲ್ಲಿ ಸ್ಥಿರತೆ, ಸರ್ಕಾರ ನಿರಂತರವಾಗಿ ಕೆಲಸ ಮಾಡಬಹುದು. ಜನರ ನಂಬಿಕೆ ಹೆಚ್ಚುವುದು ನಿರ್ಧಾರ ತ್ವರಿತವಾಗಿ ತೆಗೆದುಕೊಳ್ಳಬಹುದು' ಎಂದು ಪ್ರತಿಪಾದಿಸಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಮಮತಾ, ಕಾರ್ಯಕ್ರಮದ ಸಂಚಾಲಕಿ ಗಾಯಿತ್ರಿ, ಆಯೋಜಕ ರವಿಕಿರಣ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.