ಶಿವಮೊಗ್ಗ: ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿರುವ ಡಾ.ಜಿ.ಎಸ್. ಶಿವರುದ್ರಪ್ಪ ಸಾಹಿತ್ಯ ಭವನದಲ್ಲಿ ಜನವರಿ 24ರಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ.ಕೆ. ಪದ್ಮನಾಭ ಉಡುಪ ಅವರನ್ನು ಆಯ್ಕೆ ಮಾಡಲಾಗಿದೆ.

ಶಿವಮೊಗ್ಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಮಿತಿಯ ಸದಸ್ಯರು ಸರ್ವಾಧ್ಯಕ್ಷ ಡಾ.ಕೆ. ಪದ್ಮನಾಭ ಉಡುಪ ಅವರ ಮನೆಗೆ ಶನಿವಾರ ತೆರಳಿ ಆಹ್ವಾನ ನೀಡಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ.ಪಿ. ಸಂಪತ್ ಕುಮಾರ್, ಜಿಲ್ಲಾ ಅಧ್ಯಕ್ಷ ಡಿ.ಬಿ. ಶಂಕರಪ್ಪ, ಗೌರವ ಕಾರ್ಯದರ್ಶಿಗಳಾದ ಎಂ.ಎನ್. ಸುಂದರ್ ರಾಜ್, ರುದ್ರಮುನಿ ಎನ್. ಸಜ್ಜನ್, ಚನ್ನಬಸಪ್ಪ ನ್ಯಾಮತಿ ಜಿ.ಎಸ್. ಅನಂತ, ಹಸನ್ ಬೆಳ್ಳಿಗನೂಡು, ಬಿ. ನಾಗರಾಜ್, ಮಮತಾ ಹೆಗ್ಡೆ, ಶಾಲಿನಿ ರಾಮಸ್ವಾಮಿ, ಮಹಮದ್ ಗೌಸ್, ಎಂ.ಎಂ. ಲೋಕೇಶ್ವರಪ್ಪ ಇದ್ದರು.

ಸರ್ವಾಧ್ಯಕ್ಷರ ಪರಿಚರ: ವೃತ್ತಿಯಲ್ಲಿ ವಕೀಲರಾಗಿರುವ ಪದ್ಮನಾಭ ಉಡುಪರ ಹೆಸರು ಚಿರಪರಿತ. ಶ್ರೇಷ್ಠ ಬರಹಗಾರರಲ್ಲಿ ಒಬ್ಬರು. ತೀರ್ಥಹಳ್ಳಿ ತಾಲ್ಲೂಕು ತಾರೇಕುಡಿಗೆಯಲ್ಲಿ ಜನಿಸಿದ್ದು, ಶಿವಮೊಗ್ಗ ಇವರ ಕಾರ್ಯಕ್ಷೇತ್ರವಾಗಿದೆ.

ಸಾಹಿತ್ಯ ಕೃಷಿ: ಪದ್ಮನಾಭ ಉಡುಪರು ನಾಟಕಕಾರರಾಗಿ, ಕಾದಂಬರಿಕಾರರಾಗಿ, ಅನುವಾದಕರಾಗಿ, ಕವಿಗಳಾಗಿ ಪ್ರಸಿದ್ಧರು. ಇದುವರೆಗೆ ಅವರ 25 ಕೃತಿಗಳು ಹೊರಬಂದಿವೆ. ಡಾ.ಲಕ್ಷ್ಮೀ ನಾರಾಯಣ ಭಟ್ಟರ ಕೆಲ ಕವನಗಳನ್ನೂ ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ಪತ್ರಿಕಾ ಬರಹಗಾರರಾಗಿ ಕಟ್ಟಕಟೆ ಅಂಕಣದ ಮೂಲಕ ನ್ಯಾಯಾಲಯದ ರೋಚಕ ಘಟನೆಗಳನ್ನು ಬರೆದಿದ್ದಾರೆ. ‘ಸದ್ಗುರೂಸ್ ಬ್ಲೆಸಿಂಗ್ಸ್’ ಆಂಗ್ಲ ಮಾಸ ಪತ್ರಿಕೆಗೆ ಪ್ರತಿ ತಿಂಗಳೂ ಹಲವು ವರ್ಷಗಳ ಕಾಲ ಲೇಖನಗಳನ್ನು ಬರೆದಿದ್ದಾರೆ.

ಮಧುರೈ ಕಾಮರಾಜ ವಿಶ್ವ ವಿದ್ಯಾಲಯದ ಎಂ.ಫಿಲ್ ಪದವಿ, ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ವಾಷಿಂಗ್ಟನ್ ಅಂತರರಾಷ್ಟ್ರೀಯ ವಿವಿಯಿಂದ ಪಿ ಎಚ್ಡಿ., ಪದವಿ ಸಹ ಪಡೆದು ಪ್ರಸಿದ್ಧರಾಗಿದ್ದಾರೆ. ಡಾ.ಲಕ್ಷ್ಮೀ ನಾರಾಯಣ ಭಟ್ಟರ ಕುರಿತಾದ ‘ವಿಮರ್ಶೆಯ ಉಡುಗೊರೆ’ ಸಂಪಾದಿತ ಕೃತಿಯನ್ನು ಎಂ.ಎನ್. ಸುಂದರ ರಾಜ್ ಜೊತೆಯಲ್ಲಿ ಹೊರತಂದಿದ್ದಾರೆ. ಎಸ್.ಪಿ. ಪ್ರಕಾಶನ ಸಂಸ್ಥೆ ಪ್ರಾರಂಭಿಸಿ ಅದರ ಮೂಲಕ 20ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿದ್ದಾರೆ.

ಇವರ ಲೈಟ್ ಆಫ್ ನಾಲೆಜ್ ಕೃತಿಗೆ ಚೆನ್ನೈನ ಯು.ಆರ್.ಡಬ್ಲು.ಎ. ಸಂಸ್ಥೆಯಿಂದ 21ನೇ ಶತಮಾನದ ‘ಇಂಟಲೆಕ್ಚುವಲ್ ಅವಾರ್ಡ್’ ದೊರೆತಿದೆ. ಏಪ್ರಿಲ್ 4, 1936 ರಲ್ಲಿ ಜನಿಸಿದ ಪದ್ಮನಾಭ ಉಡುಪರು ತಮ್ಮ 87ನೇ ವಯಸ್ಸಿನಲ್ಲಿ ಶಿವಮೊಗ್ಗ ತಾಲ್ಲಕು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಾಹಿತ್ಯ ಪ್ರಿಯರನೇಕರಲದಲಿ ಸಂತಸ ತಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.