ಶಿವಮೊಗ್ಗ: ‘ಪಿಎಂ ಕಿಸಾನ್ ಯೋಜನೆಯಡಿ ಜಿಲ್ಲೆಯ 1,64,913 ರೈತರ ಖಾತೆಗೆ 20 ಕಂತುಗಳಲ್ಲಿ ₹540 ಕೋಟಿ ಜಮಾ ಮಾಡುವ ಮೂಲಕ ಕೇಂದ್ರ ಸರ್ಕಾರ ವಿಶೇಷವಾಗಿ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

‘ಫಸಲ್ ಭೀಮಾ ಯೋಜನೆಯಡಿ ಕೃಷಿ ಬೆಳೆಗಳಿಗೆ 1,93,570 ರೈತರ ಖಾತೆಗಳಿಗೆ ₹235 ಕೋಟಿ ವಿಮಾ ಹಣ ಜಮಾ ಆಗಿದೆ. ತೋಟಗಾರಿಕೆ ಮತ್ತು ಹವಾಮಾನ ಆಧಾರಿತ ಬೆಳೆಗಳಿಗೆ ಬೆಳೆವಿಮೆ ಯೋಜನೆಯಲ್ಲಿ 2,49,837 ರೈತರಿಗೆ ₹620 ಕೋಟಿ ಜಮಾ ಆಗಿದೆ’ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಮತ್ತು ಬೆಳೆವಿಮೆ ಹಣ ಬಂದಿಲ್ಲ ಎಂದು ಕೆಲವು ರೈತರು ನನಗೆ ಕರೆ ಮಾಡಿದ್ದರು. ಕೇಂದ್ರದ ವಿಪತ್ತು ನಿರ್ವಹಣಾ ಕೋಶದಿದ (ಎನ್ಡಿಆರ್ನಿಂದ) ಶೇ 75ರಷ್ಟು ಹಾಗೂ ರಾಜ್ಯದ ವಿಪತ್ತು ನಿರ್ವಹಣಾ ಕೋಶದಿಂದ (ಎಸ್ಡಿಆರ್ಎಫ್) ಶೇ 25ರಷ್ಟು ಪರಿಹಾರ ಜಮಾ ಆಗಬೇಕಿದೆ. ಒಂದು ವಾರದೊಳಗೆ ಆಗಲಿದೆ’ ಎಂದು ಹೇಳಿದರು.

‘ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ಭತ್ತ ಇನ್ನಿತರ ಕೃಷಿ ಬೆಳೆಗೆ 2023– 24ನೇ ಸಾಲಿನ ಬೆಳೆನಷ್ಟ ಪರಿಹಾರ, ₹13.5 ಕೋಟಿ ಮೂರು ತಿಂಗಳ ಹಿಂದೆ ಜಮಾ ಆಗಿದೆ. ನವೆಂಬರ್ ಅಂತ್ಯದ ವೇಳೆಗೆ 2024– 25ನೇ ಸಾಲಿನ ಹವಾಮಾನಾಧಾರಿತ ಬೆಳೆನಷ್ಟ ಪರಿಹಾರ ₹180 ಕೋಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ವರ್ಷ 60,000 ರೈತರ 1 ಲಕ್ಷ ಎಕರೆಗೆ ಅಡಿಕೆ ಬೆಳೆಹಾನಿ ಪರಿಹಾರ ಸಿಗಲಿದೆ. ಅಲ್ಲದೆ 3,000 ಎಕರೆಯಲ್ಲಿ ಬೆಳೆದ ಶುಂಠಿ, ಮಾವು ಪರಿಹಾರ ಕೂಡ ರೈತರ ಖಾತೆಗೆ ಜಮಾ ಆಗಲಿದೆ’ ಎಂದು ತಿಳಿಸಿದರು.

‘ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಮತ್ತು ದುರ್ಘಟನೆಗೆ ಸರ್ಕಾರವೇ ನೇರ ಹೊಣೆ ಹೋರಬೇಕಾಗಿದೆ. ಎಫ್ಆರ್ಪಿ ದರದ ವಿಚಾರದಲ್ಲಿ ಬೇರೆ ರಾಜ್ಯಗಳಲ್ಲಿ ಇಲ್ಲದ ಸಮಸ್ಯೆ ನಮ್ಮಲ್ಲಿ ಏಕೆ ಇದೆ ಎಂಬುದು ತಿಳಿಯುತ್ತಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಗತ್ಯವಾಗಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದರು. ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಕಬ್ಬು ಬೆಳೆಗಾರರ ಆಕ್ರೋಶಕ್ಕೆ ಕಾರಣ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ. ಜಗದೀಶ್, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಗಾಯತ್ರಿದೇವಿ ಮಲ್ಲಪ್ಪ, ಪ್ರಮುಖರಾದ ಶಿವರಾಜ್, ಮಾಲತೇಶ್, ಸಿದ್ಲಿಂಗಪ್ಪ, ಕುಮಾರನಾಯ್ಕ, ಗಣೇಶ್ ಬಿಳಿಕಿ, ಬಳ್ಳೆಕೆರೆ ಸಂತೋಷ್, ರಾಜೇಶ್ ಕಾಮತ್, ಅಣ್ಣಪ್ಪ, ಚಂದ್ರಶೇಖರ್ ಇದ್ದರು.

‘ಶರಾವತಿ ಪಂಪ್ಡ್ ಸ್ಟೊರೇಜ್ಗೆ ಕೇಂದ್ರದಿಂದ ತಡೆ’

‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸ್ಥಳೀಯರ ವಿರೋಧವನ್ನು ರಾಜ್ಯ ಸರ್ಕಾರ ಪರಿಗಣಿಸಬೇಕು. ಪಂಪ್ಡ್ ಸ್ಟೋರೇಜ್ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾದ ಕಾರಣ ಯೋಜನೆಯ ಪ್ರಸ್ತಾವವನ್ನು ತಡೆಹಿಡಿದಿರುವ ಕೇಂದ್ರ ಸರ್ಕಾರ ಈಗಾಗಲೇ ಮರುಪರಿಶೀಲನೆಗೆ ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ‘ಬಿಎಚ್ ರಸ್ತೆಯ ವಿಸ್ತರಣೆಗೆ ಸಂಬಂಧಿಸಿದಂತೆ ಸಾಗರದಲ್ಲಿ ಈಗಾಗಲೇ ಟೆಂಡರ್ ಆಗಿ 2 ವರ್ಷ ಆಗಿದೆ. ಭೂಸ್ವಾಧೀನ ಪ್ರಕ್ರಿಯೆ ನಿಧಾನವಾಗುತ್ತಿದೆ. ಕೊಡಚಾದ್ರಿ ಮತ್ತು ಕೊಲ್ಲೂರು ನಡುವಿನ ಕೇಬಲ್ ಕಾರ್ ಯೋಜನೆಗೆ ಕೂಡ ಭೂಸ್ವಾಧೀನ ಪ್ರಕ್ರಿಯೆಯಿಂದ ಸ್ವಲ್ಪ ವಿಳಂಬವಾಗಿದೆ. ಹೆದ್ದಾರಿಗೆ ಸಂಬಂಧಿಸಿದಂತೆ ಎರಡು ಸೇತುವೆಗಳಿಗೂ ನ್ಯಾಯಾಲಯದಿಂದ ತಡೆಯಾಜ್ಞೆಯ ಕಾರಣ ವಿಳಂಬವಾಗಿವೆ. ಈ ಸಂಬಂಧ ಈಗಾಗಲೇ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು ಫೆಬ್ರುವರಿ ಅಂತ್ಯದೊಳಗೆ ಎಲ್ಲವೂ ಬಗೆಹರಿಯಲಿದೆ’ ಎಂದರು.

ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ

ಜಿಲ್ಲೆಯಲ್ಲಿ ಮೆಕ್ಕೆಜೋಳ ಕೊಯ್ಲಿನ ಹಂಗಾಮು ಆರಂಭವಾಗಿದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ₹1800 ದರ ಇದೆ. ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಜೂನ್ ಮೊದಲ ವಾರದಲ್ಲೇ ಘೋಷಣೆ ಮಾಡಿದೆ. ಆದರೂ ರಾಜ್ಯ ಸರ್ಕಾರ ಇಲ್ಲಿಯವರೆಗೆ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭ ಮಾಡಿಲ್ಲ. ಆದಷ್ಟು ಬೇಗ ಖರೀದಿ ಕೇಂದ್ರ ಆರಂಭಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಂಸದ ಬಿ.ವೈ.ರಾಘವೇಂದ್ರ ಒತ್ತಾಯಿಸಿದರು. ಜಿಲ್ಲೆಯ ಸೊರಬ ಶಿಕಾರಿಪುರ ಶಿವಮೊಗ್ಗ ಗ್ರಾಮಾಂತರದಲ್ಲಿ ಆದಷ್ಟು ಬೇಗ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಭತ್ತದ ಖರೀದಿ ವೇಳೆ 1 ಚೀಲದಲ್ಲಿ 50 ಕೆ.ಜಿ. ಮಾತ್ರ ಇರಬೇಕು ಎಂದು ರೈತರಿಗೆ ಅಧಿಕಾರಿಗಳಿಗೆ ಷರತ್ತು ಹಾಕುತ್ತಿದ್ದಾರೆ. ಖಾಲಿ ಚೀಲಕ್ಕೆ ಕೇವಲ ₹3 ನೀಡುತ್ತಿದ್ದು ಚೀಲದ ಬೆಲೆ ₹30 ಇದೆ. ಅದರಲ್ಲೂ ರೈತರಿಗೆ ನಷ್ಟವಾಗುತ್ತಿದೆ. ಖಾಲಿ ಚೀಲ ಖರೀದಿಗೆ ಹೆಚ್ಚು ಹಣ ಕೊಡಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.