ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನರಾವರ್ತನೆ ತಡೆಗಷ್ಟೆ ಆಧಾರ್ ಸಂಗ್ರಹ: ಡಿ.ಎಸ್.ಅರುಣ್

Last Updated 3 ಆಗಸ್ಟ್ 2020, 9:37 IST
ಅಕ್ಷರ ಗಾತ್ರ

ಶಿವಮೊಗ್ಗ: ಉಚಿತ ಆಯುರ್ವೇದಕಿಟ್ ವಿತರಣೆಯ ಪುನರಾವರ್ತನೆ ತಡೆಯಲು ಆಧಾರ್ ಕಾರ್ಡ್ ಸಂಗ್ರಹಿಸಲಾಗುತ್ತಿದೆ. ಇತರೆ ಯಾವುದೇ ಉದ್ದೇಶವಿಲ್ಲ. ದುರುಪಯೋಗ ಆಗುವುದಿಲ್ಲಎಂದು ಕೋವಿಡ್ ಕಾರ್ಯ ಪಡೆಯ ಮುಖ್ಯಸ್ಥ ಡಿ.ಎಸ್.ಅರುಣ್ಹೇಳಿದರು.

ಆಧಾರ್ ಕಾರ್ಡ್‌ ಪಡೆಯುತ್ತಿರುವುದಕ್ಕೆಸಾಕಷ್ಟು ಅಪಸ್ವರ ಕೇಳಿಬರುತ್ತಿದೆ. ಕಿಟ್‌ ಎಲ್ಲರಿಗೂ ತಲುಪಿಸುವ ಮುಖ್ಯ ಆಶಯ ಹಾಗೂ ಕೊಟ್ಟವರಿಗೆ ಮತ್ತೆ ಕೊಡುವುದನ್ನು ತಪ್ಪಿಸಲು ಈ ಕ್ರಮ ಅನಿವಾರ್ಯ. ಇದರಿಂದ ನಾಗರಿಕರಿಗೆಯಾವುದೇ ಸಮಸ್ಯೆ ಇಲ್ಲ ಎಂದು ಸೋಮವಾರ ಪತ್ರಿಕಾಗೊಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.

ಶಿವಮೊಗ್ಗ ನಗರದಲ್ಲಿ ಹಂಚುತ್ತಿರುವ ಉಚಿತ ಆಯುರ್ವೆದಕಿಟ್ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಬೂತ್‌ಮಟ್ಟದಲ್ಲಿ ಈಗಾಗಲೇ 85 ಸಾವಿರ ಜನರಿಗೆ ನೀಡಲಾಗಿದೆ. 2ನೇ ಹಂತದಲ್ಲಿ 5 ವಾರ್ಡ್‌ಗಳಲ್ಲಿ ವಿತರಣೆ ಆರಂಭಿಸಲಾಗಿದೆಆ.14ರ ಒಳಗೆಕಿಟ್ ವಿತರಣೆ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

ಸುರಕ್ಷಾ ಪಡೆ ವಿತರಿಸುತ್ತಿರುವ ಒಂದು ಕಿಟ್‌ಗೆ ₹100 ಖರ್ಚಾಗುತ್ತಿದೆ.4 ಲಕ್ಷ ಕಿಟ್‌ಗಳಿಗೆ₹4 ಕೋಟಿ ಆವಶ್ಯಕತೆ ಇದೆ. ಹಾಗಾಗಿ ಸಂಘ ಸಂಸ್ಥೆಗಳ ನೆರವು ಕೇಳಲಾಗಿತ್ತು. ಯಾವುದೇ ಮನೆಗಳಿಗೆ ಹೋಗಿ ರಶೀದಿ ಕೊಟ್ಟು ವಸೂಲಿ ಮಾಡುತ್ತಿಲ್ಲ.ಈಗಾಗಲೇ ಸುಮಾರು ₹ 10 ಲಕ್ಷ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ನೆರವು ನೀಡಿದ್ದಾರೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ್, ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಆರ್‌ಎಸ್‌ಎಸ್ ಪ್ರಮುಖ ವಿಜೇಂದ್ರ ಸೂಲಿಕೆರೆ, ಎನ್.ಜಿ.ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT