ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ದುರ್ಗಿಗುಡಿ ಕನ್ನಡ ಸಂಘ: ರಾಜ್ಯೋತ್ಸವ ಆಚರಣೆ ನಾಳೆಯಿಂದ

-
Published 19 ಡಿಸೆಂಬರ್ 2023, 14:53 IST
Last Updated 19 ಡಿಸೆಂಬರ್ 2023, 14:53 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ದುರ್ಗಿಗುಡಿ ಕನ್ನಡ ಸಂಘದಿಂದ ದುರ್ಗಿಗುಡಿ ರಸ್ತೆಯಲ್ಲಿ ನಿರ್ಮಿಸಿರುವ ವೀರ ಶಿವಪ್ಪನಾಯಕ ಭವ್ಯ ಮಂಟಪದಲ್ಲಿ ಡಿ.20ರಿಂದ 24ರವರೆಗೆ 55ನೇ ವರ್ಷದ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಂಘದ ಮುಖಂಡ ಸ.ನ.ಮೂರ್ತಿ ತಿಳಿಸಿದ್ದಾರೆ.

ರಾಜ್ಯೋತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆ 10.30ಕ್ಕೆ ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಭುವನೇಶ್ವರಿ ದೇವಿಯ ಅದ್ದೂರಿ ಮೆರವಣಿಗೆ ನಡೆಯಲಿದೆ. ಗಾಂಧಿ ಬಜಾರ್ ಮಾರ್ಗವಾಗಿ ಹೊರಡುವ ಮೆರವಣಿಗೆ ಶಿವಪ್ಪ ನಾಯಕ ವೃತ್ತದ ಮೂಲಕ ದುರ್ಗಿಗುಡಿಗೆ ಬಂದು ಸೇರುವುದು. ಮೆರವಣಿಗೆಯಲ್ಲಿ ಕಲಾ ತಂಡಗಳು ಭಾಗವಹಿಸಲಿವೆ.

ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಡಿ.20ರಂದು ನೀತು ಮೆಲೋಡಿ ವಾದ್ಯಗೋಷ್ಠಿ, ಡಿ.21ರಂದು ಅಪೇಕ್ಷ ಮಂಜುನಾಥ್, ಭದ್ರಾವತಿ ತಂಡದಿಂದ ಚಿತ್ರಗೀತೆಗಳಿಗೆ ನೃತ್ಯ, ಡಿ.22ರಂದು ದಸೀರ ಗಾನ ಗಂಧರ್ವ ತಂಡದಿಂದ ರಸಮಂಜರಿ, ಡಿ.23ರಂದು ಪ್ರೀತಮ್ ಮತ್ತು ಸಂಗಡಿಗರಿಂದ ಗೀತ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಡಿ.24ರಂದು ಸಂಜೆ 7ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಗಾಯಕರಾದ ಸಾನ್ವಿ ಜಿ.ಭಟ್, ನಾದಿರಾ ಬಾನು, ವರ್ಣ ಚೌಹಾಣ್, ಪೃಥ್ವಿಗೌಡ, ವಿಶಾಖ ನಾಗಲಾಪುರ ಸಂಗೀತ ಸಂಜೆ ನಡೆಸಿಕೊಡುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT