ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ಇಲ್ಲಿನ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಭಕ್ತರು ತುಂಗಾ ನದಿಯ ರಾಮಕೊಂಡದಲ್ಲಿ ತೀರ್ಥಸ್ನಾನ ಮಾಡಿದರು.

ಬೆಳಗಿನ ಜಾವ ದೇವರ ಉತ್ಸವಮೂರ್ತಿಗೆ ಪೂಜೆ ಹಾಗೂ ರಾಮಕೊಂಡದಲ್ಲಿ ಪುಣ್ಯಸ್ನಾನಕ್ಕೆ ಧಾರ್ಮಿಕ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ಮುಂಜಾನೆಯಿಂದ ಬಂದು ಸ್ನಾನ ಮಾಡಿದರು. ಜಾತ್ರೆ ಪ್ರಯುಕ್ತ ಮೂರು ದಿನಗಳ ಅನ್ನಸಂತರ್ಪಣೆ ಭಾನುವಾರ ಆರಂಭವಾಗಿದೆ.

ಭೀಮನಕಟ್ಟೆ ಮಠದ ಶ್ರೀಗಳು ಪುಣ್ಯಸ್ನಾನದಲ್ಲಿ ಪಾಲ್ಗೊಂಡರು. ಗೃಹ ಸಚಿವ ಆರಗ ಜ್ಞಾನೇಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಸದಸ್ಯರು, ದೇವಸ್ಥಾನ ಧಾರ್ಮಿಕ ಮಂಡಳಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ತೆಪ್ಪೋತ್ಸವ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ತಹಶೀಲ್ದಾರ್ ಡಾ.ಎಸ್.ಬಿ. ಶ್ರೀಪಾದ್ ಪಾಲ್ಗೊಂಡಿದ್ದರು.

ಮಾತೆಯರ ಸಮಾಗಮ: ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಮ್ಮನಮಕ್ಕಿಯಲ್ಲಿ ಪಂಚ ಮಾತೆಯರ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಜಾತ್ರೆಯಲ್ಲಿ ಗಾಳಿಮಾರಮ್ಮ, ಸಮಕಾನಿ, ಗುತ್ತಿಎಡೇಹಳ್ಳಿ, ಹೊಸಳ್ಳಿ, ಆಲಬಳ್ಳಿಯ ದೇವರ ಪಲ್ಲಕ್ಕಿ ಸಮಾಗಮವಾಯಿತು. ಮಂಡಗದ್ದೆ, ಕನ್ನಂಗಿ ಕುಟ್ಲಗಾರು ದುರ್ಗಾಪರಮೇಶ್ವರಿ, ಬಾಳಗಾರು ರಾಮೇಶ್ವರ ಜಾತ್ರೆ ನಡೆಯಿತು.

ಪೊಲೀಸ್ ಇಲಾಖೆ ಬಂದೋಬಸ್ತ್ ಕೈಗೊಂಡಿತ್ತು.

ಮೈಮರೆತ ಜನ: ಕೊರೊನಾ ಹರಡುವ ಭೀತಿ ಕಾರಣ ರಾಜ್ಯ ಸರ್ಕಾರ ಜಾತ್ರೆಗೆ ನಿರ್ಬಂಧ ಹೇರಿದೆ. ಜಾತ್ರೆಯಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದಾರೆ.300 ಜನರ ಕಾರ್ಯಕ್ರಮಕ್ಕೆಭಾಗವಹಿಸಲು ಸೂಚಿಸಲಾಗಿದೆ. ಆದರೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಮುಖ್ಯಸ್ಥರು, ಅಧಿಕಾರಿಗಳು ಭಾಗಿಯಾಗಿದ್ದರೂ ಹೆಚ್ಚು ಜನರು ಸೇರಲು ಅವಕಾಶ ಮಾಡಿಕೊಡಲಾಗಿದೆ ಎಂದು ಸ್ಥಳೀಯರುದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.