ಶಿವಮೊಗ್ಗ: ಡಿ.07 ರಿಂದ ಜ.05ರ ವರೆಗೆ ಸೀತಾ ಕಲ್ಯಾಣ ಶತಮಾನೋತ್ಸವ ಹಾಗೂ ಕೋಟಿ ರಾಮನಾಮಾರ್ಚನೆ ಮಹೋತ್ಸವವನ್ನು ನಗರದ ಕೋಟೆ ಸೀತಾ ರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಡಿ.07ರ ಬೆಳಿಗ್ಗೆ ಮಹಾ ಸಂಕಲ್ಪ ಹಾಗೂ ನವಗ್ರಹ ಪೂಜೆಯ ಮೂಲಕ ಚಾಲನೆ ನೀಡಲಾಗುತ್ತದೆ. ಡಿ. 08 ರಿಂದ 17ರವರೆಗೆ ಶ್ರೀ ಭಾಗವತ ಮಹಾ ಪುರಾಣ ಹೋಮ ನಡೆಯಲಿದ್ದು, ನಂತರ ಎಚ್.ಆರ್. ಶ್ರೀಧರ್ರವರಿಂದ ಪ್ರತಿನಿತ್ಯ ಸಂಜೆ 06.30ಕ್ಕೆ ಭಾಗವತ ಸಪ್ತಾಹ ಉಪನ್ಯಾಸ ನಡೆಯಲಿದೆ.

ಡಿ.15 ರಿಂದ 17ರವರೆಗೆ ಕಲ್ಲಾಪುರದ ಪವಮಾನ ಆಚಾರ್ ಅವರಿಂದ ವಿಷ್ಣುವಿನ ದಶಾವತಾರ ಕುರಿತು ಉಪನ್ಯಾಸ ಹಾಗೂ ದಶಾವತಾರ ಉತ್ಸವ ನಡೆಯಲಿದೆ.

ಡಿ. 18ರಂದು ಸಪ್ತ ಚಿರಂಜೀವಿಗಳ ಪೂಜೆ ಹೋಮ ನಡೆಯಲಿದ್ದು, ಸಂಜೆ ಮತ್ತೂರು ಸನತ್ಕುಮಾರ್, ಅಚ್ಯುತ ಅವಧಾನಿಯವರಿಂದ ಸೀತಾ ಕಲ್ಯಾಣ ಗಮಕ ವಾಚನ ವ್ಯಾಖ್ಯಾನ, ಡಿ. 19ರಂದು ಎಳ್ಳು ಅಮಾವಾಸ್ಯೆ ಭಾಗವಾಗಿ ಶಕ್ತಿದೇವತೆಗಳ ಸಮಾವೇಶ, ಡಿ.20ರಂದು ಮಾರುತಿ ಹೋಮ ನಡೆಯಲಿದೆ. ಸಂಜೆ ಉಸ್ತಾದ್ ಹುಮಾಯೂನ್ ಹರ್ಲಾಪುರ, ನೌಷಾದ್ ಹರ್ಲಾಪುರ, ನಿಷದ್ ಹರ್ಲಾಪುರ ಅವರಿಂದ ಹಿಂದೂಸ್ತಾನಿ ಸಂಗೀತ, ದಾಸವಾಣಿ ಕಾಯಕ್ರಮ ಜರುಗಲಿದೆ.

ಡಿ. 21ರಂದು ಶ್ರೀ ಗಾಯತ್ರಿ ಹೋಮ, ಸಂಜೆ ಅರುಣ್ ಕುಮಾರ್ ಮತ್ತು ಸಂಗಡಿಗರಿಂದ ಭಕ್ತಿ ಸಂಕೀರ್ತನೆ, ಡಿ.22ರಂದು ವಿಷ್ಣು ಸಹಸ್ರನಾಮ ಹೋಮ, ಮೈಸೂರಿನ ಎಂ.ಜಿ. ಶ್ರೀಧರ್ ಸಂಗಡಿಗರಿಂದ ನಾಗಸ್ವರ, ಡಿ.23ರಂದು ಲಲಿತಾ ಸಹಸ್ರನಾಮ ಹೋಮ, ಸಂಜೆ ನೃತ್ಯಗುರು ಸೌಮ್ಯ ರಂಗಸ್ವಾಮಿಯವರ ನವಭಾವ್ ಸ್ಕೂಲ್ ಆಫ್ ಆರ್ಸ್ಟ್ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಡಿ. 24ರಂದು ಶ್ರೀಲಕ್ಷ್ಮಿ ನರಸಿಂಹ ಹೋಮ, ಸಂಜೆ ಶೃಂಗೇರಿ ಎಚ್. ಎಸ್. ನಾಗರಾಜ್ರವರಿಂದ ಕರ್ನಾಟಕ ಶಾಸೀಯ ಸಂಗೀತ, ಡಿ.25ರಂದು ಲಕ್ಷ್ಮಿ ಹಯಗ್ರೀವ ಹೋಮ ಸಂಜೆ ಸಹನಾ ಚೇತನ್ ತಂಡದವರಿಂದ ಭರತ ನಾಟ್ಯ ಪ್ರದರ್ಶನ ಇರಲಿದೆ.

ಡಿ.26ರಂದು ಸೂಕ್ತ ಹೋಮ, ಸಂಜೆ ಬೆಂಗಳೂರಿನ ಸೂಕ್ತ ಪಟ್ಟಾಭಿರಾಮನ್, ವಾಸುಕಿ ವೈಭವ್ ತಂಡದವರಿಂದ ಸಂಗೀತ ಸಂಜೆ, ಡಿ.27ರಂದು ವೈನತೇಯ ಮಂತ್ರ, ಎಚ್.ಎಸ್. ತಂಡದವರಿಂದ ಕರ್ನಾಟಕ ಶಾಸೀಯ ಸಂಗೀತ, ಡಿ.28ರಂದು ವರಾಹಸ್ವಾಮಿ ಮಂತ್ರ ಹೋಮ, ಸಂಜೆ ಗಜೇಂದ್ರ ಮೋಕ್ಷ, ಡಿ.29ರಂದು ಉತ್ಸವ ರಾಮರಿಗೆ ಅಭಿಷೇಕ, ಸಂಜೆ ವೈಭವದ ಸೀತಾ ಕಲ್ಯಾಣ ಮಹೋತ್ಸವ, ಡಿ.30ರಂದು ವೈಕುಂಠ ಏಕಾದಶಿ, ಆನೆ ಉತ್ಸವ, ಸಂಜೆ ಕುಮಾರ ಸ್ವಾಮಿ ಸಂಗಡಿಗರಿಂದ ನಾದ ವೈಭವ–ಸ್ಯಾಕ್ಯೋಪೋನ್ ವಾದನ, ಡಿ.31ರಂದು ತೀರ್ಥ ಸ್ನಾನ, ಬೆಳ್ಳಿ ಮಂಟಪದಲ್ಲಿ ರಾಜಬೀದಿ ಉತ್ಸವ ಇರಲಿದೆ.

ಜ.01ರಂದು ಸುದರ್ಶನ ಹೋಮ, ಉರುಟಣೆ, 108 ಸತ್ಯನಾರಾಯಣ ವ್ರತ, ಜ.02ರಂದು ಪಲ್ಲಕ್ಕಿ ಉತ್ಸವ ಶ್ರೀವತ್ಸ ಸಂಗಡಿಗರಿಂದ ವೇಣುವಾದನ, ಶಯನೋತ್ಸವ, ಜ.03ರಂದು ಧನ್ವಂತರಿ ಹೋಮ, ಸಂಜೆ ತುಂಗಾ ತೀರದಲ್ಲಿ ತೆಪ್ಪೋತ್ಸವ, ಜ.04ರಂದು ಮಹಾಭಿಷೇಕ, ಮೋಹಿನಿ ಅಲಂಕಾರ, ಕೋಟಿ ತ್ರಯ ನಾಮಾರ್ಚನೆ ಸಮಾರೋಪ ಮತ್ತು ಜ.05ರಂದು ರಾಮತಾರಕ ಮಂತ್ರ ಹೋಮ, ಮಹಾಭಿಷೇಕ, ಕಿರೀಟ ಸಮರ್ಪಣೆ ಹಾಗೂ ಸಂಜೆ ಪ್ರಾಕಾರೋತ್ಸವ ನಡೆಯಲಿದೆ ಎಂದು ಸೀತಾ ಕಲ್ಯಾಣ ಶತಮಾನೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.