ಪಟ್ಟಣದ ಮಿಡ್ಲ್ ಸ್ಕೂಲ್ ರಸ್ತೆ ಹಾಗೂ ದೊಡ್ಡಪೇಟೆ ರಸ್ತೆ ಬದಿಗಳಲ್ಲಿ ಇರಿಸಿರುವ ಮೂರ್ತಿಗಳನ್ನು ಕೆಲವರು ಖರೀದಿ ಮಾಡಿದರು. ಇನ್ನೂ ಕೆಲವರು ಶನಿವಾರ ಮುಂಜಾನೆ ಗಣೇಶ ಮೂರ್ತಿಗಳನ್ನು ಕೊಂಡೊಯ್ಯುವ ಉದ್ದೇಶದಿಂದ ಮೂರ್ತಿ ತಯಾರಕರಿಗೆ ಮುಂಗಡ ಹಣ ನೀಡುತ್ತಿದ್ದ ದೃಶ್ಯ ಕಂಡುಬಂದಿತು. ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅಗತ್ಯವಾದ ಹೂವು ಹಣ್ಣು ಹಾಗೂ ಅಲಂಕಾರಿಕಾ ವಸ್ತುಗಳನ್ನು ಖರೀದಿಸಿದರು.