ಶಿಕಾರಿಪುರ: ಬ್ರಿಟೀಷರ ವಿರುದ್ಧ ಹೋರಾಡಿ ಹುತಾತ್ಮರಾದ ಈಸೂರು ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿತುಕೊಳ್ಳಬೇಕು ಎಂದು ಸಿಪಿಐ ಸಂತೋಷ್ ಪಾಟೀಲ್ ಸಲಹೆ ನೀಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಸ್ವಾತಂತ್ರ್ಯ ಸ್ಮಾರಕದಲ್ಲಿ ಶನಿವಾರ ನಡೆದ ‘ಕ್ವಿಟ್ ಇಂಡಿಯಾ ಚಳವಳಿ ಒಂದು ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಶದ ಇತಿಹಾಸ ಓದಬೇಕು. ಜತೆಗೆ ಇಂದಿನ ನಮ್ಮ ಕಾನೂನನ್ನು ಓದಿ ತಿಳಿದುಕೊಂಡರೆ ನಿಜವಾದ ಸ್ವಾತಂತ್ರ್ಯ ಸಿಕ್ಕ ಅನುಭವ ಆಗುತ್ತದೆ’ ಎಂದರು.

‘ಈಸೂರು ಸಾಹುಕಾರ್ ಬಸವಣ್ಯೆಪ್ಪ ಅವರಿಗೆ ಬ್ರಿಟೀಷರು ದಂಡ ವಿಧಿಸಿದ್ದಕ್ಕೆ ಪ್ರತಿಯಾಗಿ ನಿರ್ಮಿಸಿರುವ ಕಟ್ಟಡ ಇಂದು ಶಿಥಿಲಾವಸ್ಥೆ ತಲುಪಿದೆ. ಅದಕ್ಕೆ ಕಾಯಕಲ್ಪ ನೀಡಲು ಮುಂದಾಗಬೇಕು. ಅದು ತಾಲ್ಲೂಕಿನ ಜನರ ಒತ್ತಾಯವಾಗಿದೆ’ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಲ್.ರಾಜು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಸ್.ರಘು, ಬಾಪೂಜಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಬಿ.ಪಾಪಯ್ಯ, ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್ ಬಾಳೆಕಾಯಿ, ಪತ್ರಕರ್ತರಾದ ಎಸ್.ಬಿ.ಮಠದ, ಬಿ.ಸಿ.ವೇಣುಗೋಪಾಲ್, ಅರುಣ್ಕುಮಾರ್, ಕೋಟೇಶ್ವರ, ಮಂಜಪ್ಪ, ಕಾಳಿಂಗರಾವ್, ಬಸವರಾಜ್, ವಕೀಲ ಕೋಡೆಪ್ಪ, ಶಿಕ್ಷಕ ಕಾಂತರಾಜ್, ಸರ್ಕಾರಿ ಪದವಿ ಕಾಲೇಜಿನ ಎನ್ಸಿಸಿ ತಂಡ, ಸರ್ಕಾರಿ ಪಿಯು ಕಾಲೇಜಿನ ರೋವರ್ಸ್, ರೇಂಜರ್ಸ್, ಲೀಡರ್ಸ್ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.