ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕಾರಿಪುರ: ಹರ್ಷೋದ್ಗಾರದ ಮಧ್ಯೆ ರೋಮಾಂಚನಕಾರಿ ಹೋರಿ ಹಬ್ಬ

Published 21 ಜನವರಿ 2024, 15:33 IST
Last Updated 21 ಜನವರಿ 2024, 15:33 IST
ಅಕ್ಷರ ಗಾತ್ರ

ತರಲಘಟ್ಟ (ಶಿಕಾರಿಪುರ): ಸಾವಿರಾರು ಪ್ರೇಕ್ಷಕರ ಹರ್ಷೋದ್ಗಾರದ ಮಧ್ಯೆ ತಾಲ್ಲೂಕಿನ ತರಲಘಟ್ಟ ಗ್ರಾಮದಲ್ಲಿ ಭಾನುವಾರ ರಾಜ್ಯಮಟ್ಟದ ಹೋರಿಹಬ್ಬ (ಹೋರಿ ಬೆದರಿಸುವ ಸ್ಪರ್ಧೆ) ವಿಜೃಂಭಣೆಯಿಂದ ನಡೆಯಿತು.

ತರಲಘಟ್ಟ ಗ್ರಾಮ ಸಮೀಪ ಹೋರಿ ಹಬ್ಬಕ್ಕಾಗಿ ಪ್ರತ್ಯೇಕವಾಗಿ ನಿರ್ಮಿಸಿದ್ದ ಅಖಾಡದಲ್ಲಿ ಸ್ಪರ್ಧೆ ನಡೆಯಿತು. ಹೋರಿಗಳನ್ನು ಕಾಲ್ಗೆಜ್ಜೆ, ಜೂಲಾ, ಬಲೂನ್, ಕೊಬ್ಬರಿ ಮಾಲೆ ಸೇರಿ ವಿವಿಧ ಆಲಂಕಾರಿಕ ವಸ್ತುಗಳಿಂದ ಮಾಲೀಕರು  ಸಿಂಗರಿಸಿದ್ದರು. ಹೋರಿ ಓಡುವ ಆಖಾಡದಲ್ಲಿ ತಮ್ಮ ಹೋರಿಗಳ ಹೆಸರು ಹೊಂದಿರುವ ಟಿ-ಶರ್ಟ್‌ಗಳನ್ನು ಹಾಕಿದ ಯುವಕರು, ಮಾಲೀಕರು ಹರ್ಷದಿಂದ ಓಡುತ್ತಿದ್ದರು. ತಮ್ಮ ಹೋರಿ ಹೆಸರಿನ ಧ್ವಜಗಳನ್ನು ಹಿಡಿದು ಸಾಗುತ್ತಿದ್ದರು.

ಮಾಲೀಕರು ತಮ್ಮ ಹೋರಿಗಳಿಗೆ ತಮ್ಮಿಷ್ಟದ ದೇವರು ಹಾಗೂ ಸಿನಿಮಾದ ಹೆಸರುಗಳನ್ನು ಇಟ್ಟಿದ್ದರು. ತಮ್ಮ ಹೋರಿ ವೇಗವಾಗಿ ಓಡುವ ಸಂದರ್ಭದಲ್ಲಿ ಹೋರಿ ಮಾಲೀಕರು ‘ಹಾಕೋ ಕೈಯ್ಯಾ ಮುಟ್ಟೋ ಮೈಯ್ಯಾ’ ಎಂದು ಅಭಿಮಾನದಿಂದ ಘೋಷಣೆ ಹಾಕುತ್ತಾ ಸಂಭ್ರಮದಿಂದ ಹೋರಿ ಜತೆ ಸಾಗುತ್ತಿದ್ದರು. ವೇಗವಾಗಿ ಓಡುತ್ತಿದ್ದ ಹೋರಿಗಳನ್ನು ಹಿಡಿದು ಕೊಬ್ಬರಿ ಮಾಲೆಯನ್ನು ಕೀಳುತ್ತಿದ್ದ ಸಾಹಸಿಗಳ ದೃಶ್ಯ ನೋಡುಗರ ಗಮನ ಸೆಳೆಯಿತು.

ಯಾವುದೇ ಅನಾಹುತ ಸಂಭವಿಸದಂತೆ ಆಯೋಜಕರು ಗಮನ ಹರಿಸಿದ್ದರು. ಧ್ವನಿವರ್ಧಕ ಮೂಲಕ ಹೋರಿ ಸಾಗುವ ಬಗ್ಗೆ ಸೂಚನೆ ನೀಡುತ್ತಿದ್ದರು. ಹಾವೇರಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಹಾಗೂ ಶಿಕಾರಿಪುರ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ನೂರಾರು ಹೋರಿಗಳು ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದವು.

ಶಿಕಾರಿಪುರ ತಾಲ್ಲೂಕಿನ ತರಲಘಟ್ಟ ಗ್ರಾಮದಲ್ಲಿ ಭಾನುವಾರ ರಾಜ್ಯಮಟ್ಟದ ಹೋರಿ ಹಬ್ಬ(ಹೋರಿ ಬೆದರಿಸುವ ಸ್ಪರ್ಧೆ) ಅದ್ಧೂರಿಯಾಗಿ ನಡೆಯಿತು
ಪ್ರಜಾವಾಣಿ ಚಿತ್ರ: ಎಚ್.ಎಸ್. ರಘು
ಶಿಕಾರಿಪುರ ತಾಲ್ಲೂಕಿನ ತರಲಘಟ್ಟ ಗ್ರಾಮದಲ್ಲಿ ಭಾನುವಾರ ರಾಜ್ಯಮಟ್ಟದ ಹೋರಿ ಹಬ್ಬ(ಹೋರಿ ಬೆದರಿಸುವ ಸ್ಪರ್ಧೆ) ಅದ್ಧೂರಿಯಾಗಿ ನಡೆಯಿತು ಪ್ರಜಾವಾಣಿ ಚಿತ್ರ: ಎಚ್.ಎಸ್. ರಘು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT