ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕಾರಿಪುರ | ಅಂಜನಾಪುರ ಜಲಾಶಯಕ್ಕೆ ಹರಿದು ಬಂದ ತುಂಗೆ

Published 22 ಜುಲೈ 2023, 5:47 IST
Last Updated 22 ಜುಲೈ 2023, 5:47 IST
ಅಕ್ಷರ ಗಾತ್ರ

ಎಚ್.ಎಸ್. ರಘು

ಶಿಕಾರಿಪುರ: ತಾಲ್ಲೂಕಿನ ಅಂಜನಾಪುರ ಜಲಾಶಯಕ್ಕೆ ತುಂಗಾ ನದಿ ನೀರು ಹರಿದು ಬರುತ್ತಿದ್ದು, ಭರ್ತಿಯಾಗುವ ನಿರೀಕ್ಷೆಯಿದೆ. ಜಲಾಶಯದಲ್ಲಿ ಈಗಾಗಲೇ 10 ಅಡಿ ನೀರು ಸಂಗ್ರಹವಾಗಿದ್ದು, ಉಳಿದ 12 ಅಡಿ ನೀರು ಸಂಗ್ರಹವಾದರೆ, ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ.

ತಾಲ್ಲೂಕಿನ ರೈತರ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ, ಶಿಕಾರಿಪುರ ಪಟ್ಟಣ ಹಾಗೂ ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಅಂಜನಾಪುರ ಜಲಾಶಯ ಭರ್ತಿಯಾಗಲಿ ಎಂಬ ನಿರೀಕ್ಷೆ ತಾಲ್ಲೂಕಿನ ಜನರದ್ದು. ಕಳೆದ ವರ್ಷ ಇದೇ ಅವಧಿಯಲ್ಲಿ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿತ್ತು. ಆದರೆ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಜಲಾಶಯಕ್ಕೆ ನೀರು ಹರಿದುಬರುವ ನೀರು ಕೊರತೆಯಾಗಿದೆ.

ಅಂಜನಾಪುರ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದು ಸಂತಸ ಮೂಡಿಸಿದೆ. ಭತ್ತದ ನಾಟಿಗೆ ಹಾಗೂ ಅಡಿಕೆ ಬೆಳೆಗೆ ಅನುಕೂಲವಾಗಲಿದೆ.
ಮಂಜಪ್ಪ, ರೈತ 

ತುಂಗಾ ನದಿ ನೀರು ತಾಲ್ಲೂಕಿನ ಕಮದ್ವತಿ ನದಿಗೆ ಸೇರ್ಪಡೆಯಾಗಿ ಅಂಜನಾಪುರ ಜಲಾಶಯ ತಲುಪಿರುವುದು ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ತಂದಿದ್ದು, ಭತ್ತ ನಾಟಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ದೊರಕಲಿದೆ.

ಹೊಸಳ್ಳಿ ಏತ ನೀರಾವರಿ ಯೋಜನೆ

ಹೊಸಳ್ಳಿ ಏತನೀರಾವರಿ ಯೋಜನೆಯಿಂದ ಅಂಜನಾಪುರ ಜಲಾಶಯಕ್ಕೆ ತುಂಗಾ ನದಿ ನೀರನ್ನು ತರುವ ಕೆಲಸ ಆಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ₹ 199 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಂಡಿತ್ತು. ಶಿವಮೊಗ್ಗ ಸಮೀಪದ ಹೊಸಳ್ಳಿ ಹಾಗೂ ಹರಕೆರೆ ಗ್ರಾಮದ ಸಮೀಪ ತುಂಗಾ ನದಿಗೆ ಜಾಕ್‌ವೆಲ್ ನಿರ್ಮಿಸಲಾಗಿದೆ.

ತುಂಗಾ ನದಿ ನೀರು ಕುಮದ್ವತಿ ನದಿ ನೀರಿನೊಂದಿಗೆ ಸೇರಿ ಅಂಜನಾಪುರ ಜಲಾಶಯ ತಲುಪಿದೆ. ರೈತರು ಕೃಷಿ ಚಟುವಟಿಕೆ ನಡೆಸಲು ಹೊಸಳ್ಳಿ ಏತನೀರಾವರಿ ಯೋಜನೆ ಸಹಕಾರಿಯಾಗಲಿದೆ.
ಬಿ.ವೈ. ರಾಘವೇಂದ್ರ, ಸಂಸದ 

ತುಂಗಾ ನದಿಯಿಂದ 0.75 ಟಿಎಂಸಿ ನೀರನ್ನು ಜಾಕ್‌ವೆಲ್ ಮೂಲಕ ಲಿಫ್ಟ್ ಮಾಡಲಾಗುತ್ತದೆ. ಪೈಪ್‌ಲೈನ್ ಮೂಲಕ 0.35 ಟಿಎಂಸಿ ನೀರನ್ನು ಶಿವಮೊಗ್ಗ ತಾಲ್ಲೂಕಿನ ಆಯನೂರು ಕುಂಸಿ ಹಾರನಹಳ್ಳಿ ತಮಡಿಹಳ್ಳಿ ಸಿರಿಗೆರೆ ಗ್ರಾಮಗಳ ಸುತ್ತ ಮುತ್ತಲಿನ 75 ಕೆರೆಗಳನ್ನು ತುಂಬಿಸಲಾಗುತ್ತದೆ. ನಂತರ 0.40 ಟಿಎಂಸಿ ನೀರು ಕುಮದ್ವತಿ ನದಿ ಮೂಲಕ ಅಂಜನಾಪುರ ಜಲಾಶಯವನ್ನು ತಲುಪುವ ಹಾಗೆ ಯೋಜನೆ ರೂಪಿಸಲಾಗಿದೆ. ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರು ಹಾಗೂ ಕೃಷಿಗೆ ಇಲ್ಲಿಂದ ಪೂರೈಕೆಯಾಗುತ್ತದೆ.

ಜಾಕ್ ವೆಲ್ ಯಂತ್ರಗಳು
ಜಾಕ್ ವೆಲ್ ಯಂತ್ರಗಳು
ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯಕ್ಕೆ ತಲುಪಿರುವ ತುಂಗಾ ನದಿ ನೀರು
ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯಕ್ಕೆ ತಲುಪಿರುವ ತುಂಗಾ ನದಿ ನೀರು
ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯಕ್ಕೆ ತಲುಪಿರುವ ತುಂಗಾ ನದಿ ನೀರು
ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯಕ್ಕೆ ತಲುಪಿರುವ ತುಂಗಾ ನದಿ ನೀರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT