ಶಿವಮೊಗ್ಗ: 'ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನೆಪದಲ್ಲಿ ಅಗತ್ಯ ವಸ್ತುಗಳ ಮತ್ತು ಅಗತ್ಯ ಸೇವೆಗಳ ಬೆಲೆ ಹೆಚ್ಚಳಗೊಳಿಸುತ್ತಾ ಬಡವರಿಗೆ ಅನ್ಯಾಯ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ನಗರದ ಗೋಪಿ ವೃತ್ತದಲ್ಲಿ ಸೋಮವಾರ ಬಿಜೆಪಿ ಶಿವಮೊಗ್ಗ ನಗರ ಮತ್ತು ಹಿಂದುಳಿದ ವರ್ಗಗಳ ವತಿಯಿಂದ ಸೇವಾಪಾಕ್ಷಿಕದ ಅಡಿಯಲ್ಲಿ ಆಯೋಜಿಸಿದ್ದ ಪ್ರದರ್ಶಿನಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರ ‘ಸಬ್ ಸಾತ್ ಸಬ್ ಕ ವಿಕಾಸ್’ ಮಾಡುತ್ತಾ ಜಗತ್ತಿನ ನಾಲ್ಕನೇ ಅತೀದೊಡ್ಡ ಆರ್ಥಿಕ ಶಕ್ತಿಯಾಗಿ, ಸ್ವಾವಲಂಬಿ ಭಾರತವಾಗಿ ವಿಶ್ವದ ಗಮನ ಸೆಳೆದಿದೆ ಎಂದರು.

ಪಂಡಿತ್ ದೀನ್ದಯಾಳ್ ಜೀ ಅವರ ಪರಿಕಲ್ಪನೆ ಕಟ್ಟಕಡೆಯ ವ್ಯಕ್ತಿಗೂ ಕೂಡ ಮೂಲ ಸೌಲಭ್ಯ ಸಿಗಬೇಕು ಎಂಬುದಾಗಿದೆ. ಅದನ್ನು ಮೋದಿ ಸರ್ಕಾರ ಸದ್ಧಿಲ್ಲದೆ ನಡೆಸುತ್ತಾ ಬಂದಿದೆ. ಆರೋಗ್ಯವಿಮೆ, ಕೃಷಿಸಮ್ಮಾನ್, ಮುದ್ರಾ ಯೋಜನೆ, ಬೀದಿಬದಿ ವ್ಯಾಪಾರಸ್ಥರಿಗೆ ಅನುಕೂಲ, ಸ್ವಚ್ಛಭಾರತ್, ಗ್ರಾಮೀಣ ರಸ್ತೆಗಳು, ಶೌಚಾಲಯಗಳು ಸೇರಿದಂತೆ ನೂರಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಆದರೂ ಏನೂ ಮಾಡದೇ ಇದ್ದವರು ದೊಡ್ಡ ದೊಡ್ಡ ಭಾಷಣ ಮಾಡಿ ಜನರಿಗೆ ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ನಗರಾಧ್ಯಕ್ಷ ಮೋಹನ್ರೆಡ್ಡಿ ಪ್ರಮುಖರಾದ ಮಾಲ್ತೇಶ್, ಮಂಜುನಾಥ್, ದೀನ್ದಯಾಳ್, ಪ್ರದೀಪ್ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.