ಈ ವ್ಯಾಪ್ತಿಯಲ್ಲಿ ವಾಡಿಕೆ ಮಳೆ 1067.6 ಮಿ.ಮೀ. ಆಗಿದ್ದು, ಜನವರಿ 2024ರಿಂದ ಇಲ್ಲಿಯವರೆಗೆ 1297.8 ಮಿ.ಮೀ. ಮಳೆ ದಾಖಲಾಗಿದೆ. 230.2 ಮಿ.ಮೀ. ಮಳೆ ಹೆಚ್ಚಳವಾದಂತಾಗಿದೆ. ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವ ಭತ್ತದ ತಳಿಗಳಾದ ಅಭಿಲಾಷ, ಆರ್‌ಎನ್‌ಆರ್, ಎಂಟಿಯು 1001 ಹಾಗೂ ವಿವಿಧ ತಳಿಯ ಮುಸುಕಿನ ಜೋಳದ ಬೀಜಗಳು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.