ಬುಧವಾರ, ಅಕ್ಟೋಬರ್ 20, 2021
24 °C

8ರಿಂದ ರಾಜ್ಯ ಮಟ್ಟದ ಕ್ರಿಕೆಟ್‌ ಪಂದ್ಯಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಗೋಪಾಳದ ಸಹನ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಅ.8ರಿಂದ 10ರ ವರೆಗೆ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಶಾರದಾ ದೇವಿ ಅಂಧರ ವಿಕಾಸ ಕೇಂದ್ರದ ಕ್ರೀಡಾಂಗಣದಲ್ಲಿ ನಡೆಯಲಿದೆ.

3 ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಗೆ ₹ 15 ಸಾವಿರ ಪ್ರವೇಶ ಶುಲ್ಕವಿದೆ. ಪ್ರತಿ ಪಂದ್ಯ 6 ಓವರ್‌ಗಳಿಗೆ ಸೀಮಿತವಾಗಿದೆ. ಈಗಾಗಲೇ 16 ತಂಡಗಳು ನೋಂದಣಿ ಮಾಡಿಕೊಂಡಿವೆ ಎಂದು ಸಂಘಟಕರು ತಿಳಿಸಿದ್ದಾರೆ.

ಮೊದಲ ಬಹುಮಾನ ₹ 1.50 ಲಕ್ಷ , ದ್ವಿತೀಯ ಬಹುಮಾನ ₹ 75 ಸಾವಿರ ನಿಗದಿ ಮಾಡಲಾಗಿದೆ. ಅ.8ರಂದು ಬೆಳಿಗ್ಗೆ ಪಂದ್ಯಾವಳಿಯನ್ನು ಡಿ.ಎಸ್. ಅರುಣ್ ಉದ್ಘಾಟಿಸುವರು. ತುಂಗಾನಗರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಎಸ್. ದೀಪಕ್, ಕೋಟೆ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಚಂದ್ರಶೇಖರ್, ಮ್ಯಾಕ್ಸ್ ಆಸ್ಪತ್ರೆಯ ಡಾ. ತೇಜಸ್ವಿ, ಸಹನಾ ಕ್ರಿಕೆಟರ್ಸ್ ಸಂಸ್ಥಾಪಕ ಬಸವೇಗೌಡ ಭಾಗವಹಿಸಲಿದ್ದಾರೆ. ಪಾಲಿಕೆ ಸದಸ್ಯ ಎನ್.ಎಸ್. ಮಂಜುನಾಥ್ ವಹಿಸಲಿದ್ದಾರೆ.

ಅ.10ರಂದು ನಡೆಯುವ ಸಮಾರೋಪದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಎಸ್.ಪಿ. ದಿನೇಶ್, ಎಸ್. ಶಿವಕುಮಾರ್, ಹಬೀಬ್ ಖಾನ್, ಎನ್.ಎಸ್. ಮಂಜುನಾಥ್ ಭಾಗವಹಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು