ತೀರ್ಥಹಳ್ಳಿ: ‘ಸಾಗುವಳಿ ಪ್ರದೇಶದಲ್ಲಿ ಕೀಟನಾಶಕ ಬಳಕೆ ಅತಿಯಾಗುತ್ತಿದೆ. ಇದರಿಂದ ಭೂಮಿ ಫಲವತ್ತತೆ ಹಾಳಾಗುವಂತಾಗಿದೆ. ಸುಸ್ಥಿರ ಕೃಷಿ ನಡೆಸುವವರು ಪರಿಸರದ ಸಮತೋಲನ ಕಾಪಾಡಬೇಕು’ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್ ಅಭಿಪ್ರಾಯಪಟ್ಟರು.

ಭಾರತೀಯ ಸಾಂಬಾರು ಮಂಡಳಿ, ಮಲ್ನಾಡ್ ಕ್ಲಬ್, ವಿಹಂಗಮ ಪರಿಸರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಬುಧವಾರ ಗ್ರಾಮೀಣಾಭಿವೃದ್ಧಿ ಭವನದಲ್ಲಿ ನಡೆದ ಸಾಂಬಾರು ಬೆಳೆಗಳ ವೈವಿಧ್ಯ, ಸುಸ್ಥಿರ ಅಭಿವೃದ್ಧಿ ಹಾಗೂ ನರ್ಸರಿ ನಿರ್ವಹಣೆ ಕುರಿತ ಕಾರ್ಯಾಗಾರ ಹಾಗೂ ಕ್ಷೇತ್ರ ಭೇಟಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅಡಿಕೆ ತೋಟಗಳಲ್ಲಿ ಕೀಟಗಳಿಗೆ ಅವಶ್ಯಕವಾದ ಹುಲ್ಲು, ಗಿಡಗಳಂತಹ ಕಳೆ ನಿರ್ಮೂಲನೆಗೆ ಕೀಟನಾಶಕ ಬಳಕೆಯಾಗುತ್ತಿದೆ. ಇದು ಭೂಮಿ ಮೇಲೆ ಬದುಕಬೇಕಾದ ಕೀಟಗಳನ್ನು ಮರ ಹತ್ತುವುದಕ್ಕೆ ಅವಕಾಶ ಮಾಡಿಕೊಡುತ್ತಿದೆ. ಕಳೆಗಳು ಇದ್ದಹಾಗೆಯೆ ತೋಟ ನಿರ್ವಹಣೆ ಮಾಡಿದರೆ ರೋಗಗಳು ತಗ್ಗಬಹುದು. ಜೊತೆಗೆ ಮಣ್ಣಿನ ಆರೋಗ್ಯ ಕೂಡ ವೃದ್ಧಿಯಾಗಬಹುದು’ ಎಂದು ಹೇಳಿದರು.

‘ಪಶ್ಚಿಮಘಟ್ಟದ ಕಾಡುಗಳಿಂದ ಆರೋಗ್ಯಕರ ಗಾಳಿ ಸಿಗುತ್ತಿದೆ. ನಾನು ಅಡಿಕೆ ಬೆಳೆಗಾರರಾಗಿದ್ದು, ಧಾರಣೆ ಲಾಭದಾಯಕವಾಗಿದೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಬಹುದು. ಕಳೆಯನ್ನು ಹಾಗೆಯೇ ತೋಟಗಳಲ್ಲಿ ಬಿಡುತ್ತಿದ್ದು, ಕೀಟಗಳ ಬಾಧೆ ಕಡಿಮೆಯಾಗುತ್ತಿದೆ. ರೌಂಡಪ್ ಬಳಕೆ ಕಡಿಮೆ ಮಾಡಿ’ ಎಂದು ಸಲಹೆ ನೀಡಿದರು.

‘ಲವಂಗ, ಏಲಕ್ಕಿ, ಕಾಳುಮೆಣಸು, ಕೋಕಂ, ತೆಂಗು ಮಲೆನಾಡಿನಲ್ಲಿ ಉಪಬೆಳೆಯಾಗಿ ಲಾಭ ಪಡೆಯಬಹುದು. ಜಾಯಿಕಾಯಿ ಬೆಳೆಯುವಾಗ ಗಂಡು ಮತ್ತು ಹೆಣ್ಣು ಮರಗಳನ್ನು ನೋಡಿ ಬೆಳೆಯಬೇಕು. ಕ್ರಾಸ್ ಪಾಲಿನೇಷನ್ಗೆ ಅನುಕೂಲವಾದರೆ ಜಾಯಿಕಾಯಿ ಉತ್ತಮ ಬೆಳೆ. ಅಗತ್ಯ ಸಸಿಗಳನ್ನು ಮಾಡಿಕೊಳ್ಳುವುದರ ಜೊತೆಗೆ ಇತರರಿಗೆ ಸಸಿಗಳನ್ನು ಮಾಡಿಕೊಡಬಹುದು’ ಎಂದು ಭಾರತೀಯ ಸಾಂಬಾರು ಮಂಡಳಿ ನಿವೃತ್ತ ನಿರ್ದೇಶಕ ಎಚ್.ಎಸ್.ಶ್ರೀನಿವಾಸ್ ಹೇಳಿದರು.

‘ದೇಶ, ವಿದೇಶದ ಹಣ್ಣಿನ ತಳಿಗಳು ಸುಲಭವಾಗಿ ಸಿಗುತ್ತಿದ್ದು, ಹಣ್ಣಿನ ತೋಟಗಳನ್ನು ನಿರ್ಮಾಣ ಮಾಡಬಹುದು. ಅಡಿಕೆ ಸಿಪ್ಪೆಯನ್ನು ಉರುವಲು ಮಾಡುವ ಬದಲು ಗೊಬ್ಬರವಾಗಿ ಬಳಕೆ ಮಾಡಿಕೊಳ್ಳಬೇಕು. ನಮ್ಮ ಉತ್ಪನ್ನಗಳ ಮೌಲ್ಯವರ್ಧನೆಯನ್ನು ನಿಂತ ಜಾಗದಲ್ಲಿ ನಾವೇ ಮಾಡಬಹುದು’ ಎಂದು ವಿಹಂಗಮ ಪರಿಸರ ಅಧ್ಯಯನ ಕೇಂದ್ರದ ಕಡಿದಾಳು ದಯಾನಂದ ಹೇಳಿದರು.

ಜೀವ ವೈವಿಧ್ಯ ಮಂಡಳಿ ಡಿಡಿ ಪವಿತ್ರಾ, ಸಾಂಬಾರು ಮಂಡಳಿಯ ಆಶಾ ವಾಸುದೇವ, ಸುನೀಲ್ ಕುಮಾರ್ ಜಿ, ಇಒ ಎನ್.ಶೈಲಾ, ಮಲ್ನಾಡ್ ಕ್ಲಬ್ ಅಧ್ಯಕ್ಷ ಬಿಳುವೆ ಪ್ರವೀಣ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.