ತೀರ್ಥಹಳ್ಳಿ: ನಕಲಿ ಬಂಗಾರ ಕೊಟ್ಟು ವ್ಯಕ್ತಿಯೊಬ್ಬರಿಗೆ ₹20 ಲಕ್ಷ ವಂಚಿಸಿದ ಪ್ರಕರಣ ಗುರುವಾರ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.

ಆಂಧ್ರಪ್ರದೇಶದ ಕಡಪ ಜಿಲ್ಲೆಯ ನಿವಾಸಿ ಶ್ರೀನಿವಾಸ (54) ವಂಚನೆಗೊಳಗಾದ ವ್ಯಕ್ತಿ.

ಶ್ರೀನಿವಾಸ್ಗೆ ಬಳ್ಳಾರಿ ಜಿಲ್ಲೆಯಲ್ಲಿ ಒಬ್ಬ ಯುವಕ ಹಾಗೂ ಮಧ್ಯವಯಸ್ಕ ಪರಿಯಚಯವಾಗಿದ್ದರು. ತಮ್ಮೊಂದಿಗೆ ಹಳೆಯ ಕಾಲದ ಬಂಗಾರದ ನಾಣ್ಯಗಳಿದ್ದು, ಅವುಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದಾಗಿ ಶ್ರೀನಿವಾಸ್ಗೆ ತಿಳಿಸಿದ್ದರು.

‘ಎರಡು ಅಸಲಿ ಬಂಗಾರದ ನಾಣ್ಯಗಳನ್ನು ಸ್ಯಾಂಪಲ್ ಕೊಟ್ಟು ನಿಜವೆಂದು ನಂಬಿಸಿದ್ದರು. ಜ.22ರಂದು ತೀರ್ಥಹಳ್ಳಿಯ ಆಗುಂಬೆ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆತಂದ ವಂಚಕರು, 4 ಕೆ.ಜಿ.ಯಷ್ಟು ನಕಲಿ ಬಂಗಾರದ ನಾಣ್ಯಗಳನ್ನು ನೀಡಿ, ₹20 ಲಕ್ಷ ನಗದು ಪಡೆದುಕೊಂಡಿದ್ದರು. ಜೊತೆಗೆ ಅವರ ಬಳಿಯಿದ್ದ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದರು. ನಂತರ ನಾಣ್ಯಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂಬುದು ಗೊತ್ತಾಗಿದೆ.

ಮೋಸ ಹೋಗಿರುವುದನ್ನು ಅರಿತ ಶ್ರೀನಿವಾಸ್, ತೀರ್ಥಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.