ಬುಧವಾರ, ಸೆಪ್ಟೆಂಬರ್ 22, 2021
29 °C

ರೈಲ್ವೆ ಹಳಿ ಜಲಾವೃತ: ಸಂಚಾರ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ತಾಳಗುಪ್ಪ ಸಮೀಪ ರೈಲ್ವೆ ಹಳಿ ಜಲಾವೃತವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

ಜುಲೈ 23ರಂದು ರಾತ್ರಿ ತಾಳಗುಪ್ಪದಿಂದ ಶಿವಮೊಗ್ಗ, ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ತೆರಳಬೇಕಿದ್ದ 06228 ಸಂಖ್ಯೆಯ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಮೈಸೂರು ವಿಭಾಗದ ಸೀನಿಯರ್ ಡಿವಿಜನಲ್‌ ಕಮರ್ಷಿಯಲ್ ಮ್ಯಾನೇಜರ್ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಇಂಟರ್‌ಸಿಟಿ ರೈಲು ಶಿವಮೊಗ್ಗದಲ್ಲೇ ಸ್ಥಗಿತ: ಬೆಂಗಳೂರು–ತಾಳಗುಪ್ಪ (ರೈಲು ಸಂಖ್ಯೆ 06529) ರೈಲು ಸಂಚಾರವನ್ನು ಶಿವಮೊಗ್ಗದವರಿಗೆ ಸೀಮಿತಗೊಳಿಸಲಾಗಿದೆ. ಜುಲೈ 23ರಂದು ಶಿವಮೊಗ್ಗದಿಂದ ತಾಳಗುಪ್ಪಗೆ ರೈಲು ಸಂಚರಿಸುವುದಿಲ್ಲ. ಜುಲೈ 24ರಂದು ತಾಳಗುಪ್ಪ –ಬೆಂಗಳೂರು (ರೈಲು ಸಂಖ್ಯೆ 06530) ರೈಲು ಸಂಚಾರ ಶಿವಮೊಗ್ಗದಿಂದ ಶುರುವಾಗಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು