ಭಾನುವಾರ, ಮೇ 9, 2021
24 °C
ಹಬ್ಬ: ಜಿಲ್ಲೆಯ ವಿವಿಧೆಡೆ ಸಿದ್ಧತೆ ಜೋರು

ಯುಗಾದಿ: ಕೊರೊನಾ ಲೆಕ್ಕಿಸದೇ ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೊರೊನಾ ಆತಂಕ, ಬೆಲೆ ಏರಿಕೆ ಮಧ್ಯೆಯೂ ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬದ ಖರೀದಿಗೆ ಜನರು ಪ್ರಮುಖ ಮಾರುಕಟ್ಟೆಗಳಲ್ಲಿ ಮುಗಿಬಿದ್ದಿದ್ದರು.

ದಿನಸಿ, ತರಕಾರಿ, ಹಣ್ಣು, ಹೂಗಳ ಬೆಲೆ ಗಗನಕ್ಕೇರಿದ್ದರೂ ಜನರ ಖರೀದಿಯ ಉತ್ಸಾಹ ಕಡಿಮೆಯಾಗಿರಲಿಲ್ಲ. ಗಾಂಧಿ ಬಜಾರ್, ವಿನೋಬನಗರ, ಕುವೆಂಪು ರಸ್ತೆ, ಬಿ.ಎಚ್‌.ರಸ್ತೆಗಳ ಬದಿ ಇಟ್ಟುಕೊಂಡಿದ್ದ ಮಾವಿನ ಸೊಪ್ಪು, ಬೇವಿನ ಸೊಪ್ಪುಗಳನ್ನು
ಖರೀದಿಸಿದರು. ಕೆಲವು ವೃತ್ತಗಳಲ್ಲೂ ಹಣ್ಣು, ಹಂಪಲು ಮಾರಾಟ ಜೋರಾಗಿತ್ತು.

ವಿನೋಬ ನಗರದ ತರಕಾರಿ ಮಾರುಕಟ್ಟೆಯಲ್ಲೂ ಜನಜಂಗುಳಿ ಇತ್ತು. ರಸ್ತೆಯ ಇಕ್ಕೆಲಗಳಲ್ಲೂ ವ್ಯಾಪಾರಿಗಳು ತರಕಾರಿ, ಹಣ್ಣು, ಹೂ ಮಾರಾಟ ಮಾಡುತ್ತಿದ್ದರು.

ಬಹುತೇಕ ಜನರು ಮಾಸ್ಕ್‌ ಧರಿಸದೇ, ಅಂತರ ಕಾಪಾಡಿಕೊಳ್ಳದೆ ಜನಜಂಗುಳಿಯ ಮಧ್ಯೆ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವ್ಯಾಪಾರಿಗಳು ಮತ್ತು ಅಂಗಡಿಗಳ ಸಿಬ್ಬಂದಿ ಮಾಸ್ಕ್‌ ಧರಿಸಿದ್ದರು.

ಬಸ್‌ಗಳಲ್ಲೂ ಜನ ಸಂದಣಿ: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಕಾರಣ ಗ್ರಾಮೀಣ ಪ್ರದೇಶಗಳಿಂದ ಹಬ್ಬದ ಖರೀದಿಗೆ
ಬರುವ ಜನರು ಖಾಸಗಿ ಬಸ್‌ಗಳ ಮೇಲೆ ಅವಲಂಬಿತರಾಗಿದ್ದರು. ಬಹುತೇಕ ಬಸ್‌ಗಳು ಅಗತ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಕೊಂಡು ಬರುತ್ತಿದ್ದವು. ಬಸ್‌ಗಳಲ್ಲೂ ಅಂತರ ಕಾಣದಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು