ತೀರ್ಥಹಳ್ಳಿ: ಹೆಣ್ಣು ಕೇವಲ ಮನೆಗೆ ಮಾತ್ರ ಸೀಮಿತ ಎಂಬ ಚೌಕಟ್ಟಿನಿಂದ ಹೊರಬರಬೇಕಿದೆ. ಕೀಳರಿಮೆ ಅಧೋಗತಿಗೆ ತಳ್ಳುತ್ತದೆ. ಮಹಿಳೆಯರು ಆರ್ಥಿಕ, ಸಾಂಸ್ಕೃತಿಕ ಅರಿವು ಹೊಂದುವ ಮೂಲಕ ಕೀಳರಿಮೆ ತೊಲಗಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಲಹೆ ನೀಡಿದರು.
ಪಟ್ಟಣದ ಮಾಧವ ಮಂಗಲ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ನಡೆದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ರಕ್ಷಣೆ, ವಾಯುಯಾನ, ನೌಕಾದಳ, ಉದ್ಯೋಗ, ವ್ಯಾಪಾರ ಕ್ಷೇತ್ರದಲ್ಲಿ ಮಹಿಳೆಯರು ಎತ್ತರದ ಸ್ಥಾನವನ್ನು ಅಲಂಕರಿಸಿದ್ದಾರೆ. ಹಗಲು-ರಾತ್ರಿ ತನ್ನ ಕುಟುಂಬವನ್ನು ಕಾಪಾಡುವ ರೀತಿಯಲ್ಲಿ ದೇಶವನ್ನು ಜೋಪಾನ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮಾಭಿವೃದ್ದಿ ಯೋಜನೆ ಮಹಿಳೆಯರಲ್ಲಿ ಸ್ವಾಭಿಮಾನ ಬೆಳೆಸಿದೆ. ಯೋಜನೆಯಡಿ ದೊರೆತ ಸಾಲ ಸದ್ಬಳಕೆ ಮಾಡಿಕೊಂಡು ವಾಪಸ್ಸು ಪಾವತಿ ನಿಷ್ಠೆ ತೋರಿದ್ದಾರೆ. ಯೋಜನೆಯ ಚಿಂತನೆ ದೇಶಕ್ಕೆ ವಿಸ್ತರಿಸಬೇಕು ಎಂಬ ಪ್ರಯತ್ನವನ್ನು ನರೇಂದ್ರ ಮೋದಿ ಅವಲೋಕನ ಮಾಡುತ್ತಿದ್ದಾರೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ ಶೆಟ್ಟಿ, ಶಿವಮೊಗ್ಗ ಬಿ.ಸಿ. ಟ್ರಸ್ಟ್ ನಿರ್ದೇಶಕ ಚಂದ್ರಶೇಖರ್, ಜನಜಾಗೃತಿ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ಮಲೆನಾಡು ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಪ್ರಸಿಲ್ಲಾ ಪಿಂಟೊ, ಆಪ್ತ ಸಮಾಲೋಚಕಿ ವಿನುತಾ ಮುರುಳಿದರ್, ಸಹಾಯಕ ಸರ್ಕಾರಿ ಅಭಿಯೋಜಕಿ ಪ್ರೇಮಲೀಲಾ, ತಾಲ್ಲೂಕು ಕರವೇ ಅಧ್ಯಕ್ಷೆ ಜ್ಯೋತಿ ದಿಲೀಪ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.