ಶಿವಮೊಗ್ಗ: ವ್ಯಕ್ತಿಗಳ ಆರೋಗ್ಯದ ಕಾಳಜಿಯನ್ನು ವೈದ್ಯರು ವಹಿಸಿದರೆ, ಸಮಾಜದ ಆರೋಗ್ಯದ ಬಗ್ಗೆ ಪೊಲೀಸರು ಯೋಚಿಸುತ್ತಾರೆ. ದೇಶದ ಆರೋಗ್ಯವನ್ನು ಸೈನಿಕರು ತಮ್ಮ ಕುಟುಂಬವನ್ನು ಬದಿಗಿಟ್ಟು ರಕ್ಷಣೆ ಮಾಡುತ್ತಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ತುಂಗಾ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಒಳ- ಹೊರಗಿನ ಶತ್ರುಗಳಿಂದ ದೇಶದ ಅಸ್ಮಿತೆ ರಕ್ಷಿಸಿದ ಸಿಂಧೂರ ವೀರರಿಗೊಂದು ನಮನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾವನಾತ್ಮಕ ಕಾರ್ಯಕ್ರಮವಿದು. ಪೊಲೀಸರು, ಸೈನಿಕರು ನಿಜವಾದ ಹೀರೋಗಳು. ಪಾಕಿಸ್ತಾನದ ಕುತಂತ್ರಕ್ಕೆ ಸರಿಯಾದ ಏಟನ್ನು ನೀಡಿದ ಸೈನಿಕರ ಹಿಂದೆ ಇರುವ ಶಕ್ತಿ ನರೇಂದ್ರ ಮೋದಿ. ಮಾತಿಗಿಂತ ಕೆಲಸದ ಮೂಲಕ ಎಲ್ಲರಿಗೂ ಉತ್ತರ ನೀಡಿದ್ದಾರೆ. ವಿಶ್ವದ ಹಲವು ದೇಶಗಳು ಯುದ್ಧ ಮಾಡುತ್ತಿವೆ. ಪ್ರಪಂಚಕ್ಕೆ ಮೂರನೇ ಮಹಾಯುದ್ಧದ ಛಾಯೆ ಆವರಿಸುತ್ತಿದೆ’ ಎಂದರು.

ಸಿಂಧೂರವೆಂದರೆ ದೇಶದ ಅಸ್ಮಿತೆ. ಈ ಅಸ್ಮಿತೆ ಉಳಿವಿಗೆ ಸೈನಿಕರು ಹೋರಾಡಿದ್ದಾರೆ. ಭಯೋತ್ಪಾದನೆ ವಿರುದ್ಧ ಸಮರ ಸಾರಿದ್ದಾರೆ. ಪೆಹಲ್ಗಾಮ್ ದಾಳಿಯಲ್ಲಿ ಮಡಿದ ಅಮಾಯಕರ ಬಲಿದಾನ ವ್ಯರ್ಥವಾಗಲು ಬಿಡಕೂಡದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

‘ನಾವು ನೆಮ್ಮದಿಯಿಂದ ನಿದ್ರಿಸುವುದಕ್ಕೆ ಗಡಿ ಭಾಗದಲ್ಲಿ ಸೈನಿಕರ ಶ್ರಮ ಹಾಗೂ ತ್ಯಾಗವೇ ಕಾರಣ. ಕುಟುಂಬದಿಂದ ದೂರಾಗಿ ಸಾವಿರಾರು ಕಿ.ಮೀ. ದೂರದಲ್ಲಿ ದೇಶ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ’ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ಕಳೆದ ಎಂಟು ವರ್ಷದಿಂದ ಈ ರೀತಿಯ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಆಪರೇಷನ್ ಸಿಂಧೂರದಡಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತುಂಗಾ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಳ್ಳೇಕೆರೆ ಸಂತೋಷ ಹೇಳಿದರು.

ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರು ದಿಕ್ಸೂಚಿ ಭಾಷಣ ಮಾಡಿದರು. ಪಹಲ್ಗಾಮ್ ದಾಳಿಯಲ್ಲಿ ಹತ್ಯೆಯಾದ ಭಾರತಿಯರಿಗೆ ಶ್ರದ್ದಾಂಜಲಿ, ನಿಷ್ಠಾವಂತ ಸೇನಾ ಹಾಗೂ ಪೋಲೀಸ್ ಸಿಬ್ಬಂದಿಗೆ ಸಮ್ಮಾನ, ಹುತಾತ್ಮರಾದ ಕರ್ತವ್ಯನಿರತ ಪೊಲೀಸ್ ಕುಟುಂಬಕ್ಕೆ ಗೌರವ ಸಮರ್ಪಿಸಲಾಯಿತು. ನಗರದ ಟೀಮ್ ಕಲಾತ್ಮದಿಂದ ದೇಶಭಕ್ತಿ ಗೀತೆಗಳ ಗಾಯನ ನಡೆಯಿತು.

ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ಯೋಧ ರಮೇಶ್ ಹವಾಲ್ದಾರ್, ಹುತಾತ್ಮ ಸಂತೋಷ್ ಅವರ ಕುಟುಂಬಸ್ಥರಾದ ಕೃಷ್ಣಪ್ಪ, ಸಾವಿತ್ರಮ್ಮ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಸಿ.ಎ.ಹಿರೇಮಠ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.