ಭಾನುವಾರ, ನವೆಂಬರ್ 1, 2020
20 °C

ಯಲಹಂಕ ತಹಶೀಲ್ದಾರ್ ಹುದ್ದೆಗೆ ₹ 1.5 ಕೋಟಿ ಲಂಚ: ಕುಮಾರಸ್ವಾಮಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ: ಯಲಹಂಕ ತಹಶೀಲ್ದಾರ್ ರಘುಮೂರ್ತಿ ಅವರು ಹುದ್ದೆ ಪಡೆಯಲು ಬಿಜೆಪಿಗೆ ₹1.5 ಕೋಟಿ ಲಂಚ ನೀಡಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ತಹಶೀಲ್ದಾರ್ ರಘುಮೂರ್ತಿ ಅಮಾನತಿನ ಸುದ್ದಿ ಪ್ರಸ್ತಾಪಿಸಿ, ‘ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಪ‍ಕ್ಷದ ಕಾರ್ಯಕರ್ತರೊಬ್ಬರು ರಘುಮೂರ್ತಿ ಅವರನ್ನು ನನ್ನ ಬಳಿ ಕರೆತಂದು ಯಲಹಂಕ ತಹಶೀಲ್ದಾರರಾಗಿ ನೇಮಿಸಿದರೆ ₹ 1 ಕೋಟಿ ನೀಡುತ್ತಾರೆ ಎಂದು ಹೇಳಿದ್ದರು.

‘ಇವರು ಭ್ರಷ್ಟಾಚಾರದಿಂದ ಹಣ ಗಳಿಸುತ್ತಾರೆ. ಇಂತಹದನ್ನು ಯಾವುದೇ ಕಾರಣಕ್ಕೂ ಪ್ರೋತ್ಸಾಹಿಸುವುದು ಬೇಡ. ಇನ್ನು ಮುಂದೆ ಇಂತಹವರನ್ನು ಕರೆತರಬೇಡ ಎಂದು ಕಾರ್ಯಕರ್ತನಿಗೆ ಬುದ್ಧಿ ಹೇಳಿ ಕಳುಹಿಸಿದ್ದೆ. ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದಾಗ ₹1.5 ಕೋಟಿ ನೀಡಿ ಹುದ್ದೆ ಪಡೆದಿದ್ದ ರಘುಮೂರ್ತಿ ಈಗ ₹ 150 ಕೋಟಿ ಅವ್ಯವಹಾರ ನಡೆಸಿದ್ದಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು