ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿ: ₹ 50 ಲಕ್ಷ ಉಳಿತಾಯ ಬಜೆಟ್

Last Updated 19 ಮಾರ್ಚ್ 2023, 8:14 IST
ಅಕ್ಷರ ಗಾತ್ರ

ಮಧುಗಿರಿ: ಪಟ್ಟಣದ ಪುರಸಭೆಯಲ್ಲಿ ಶನಿವಾರ ಅಧ್ಯಕ್ಷ ತಿಮ್ಮರಾಜು ಅವರು, 2023-24ನೇ ಸಾಲಿನಡಿ ₹ 50 ಲಕ್ಷ ಉಳಿತಾಯ ಆಯವ್ಯಯ ಮಂಡಿಸಿದರು.

ಈ ಸಾಲಿನಲ್ಲಿ ಆರಂಭಿಕ ಶಿಲ್ಕು ₹16.15 ಕೋಟಿ, ಅಂದಾಜು ಜಮೆ ₹14.44 ಕೋಟಿ ಸೇರಿದಂತೆ ಒಟ್ಟು ₹30.59 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಅಂದಾಜು ಖರ್ಚು ₹19.20 ಕೋಟಿ ನಿಗದಿಯಾಗಿದೆ.

ನೌಕರರ ವೇತನ ₹20.22 ಕೋಟಿ, ವಾಣಿಜ್ಯ ಮಳಿಗೆಗಳ ಬಾಡಿಗೆ ₹ 2.71 ಕೋಟಿ, ಎಸ್.ಎಫ್.ಸಿ ವಿದ್ಯುತ್ ಅನುದಾನ ₹4.96 ಕೋಟಿ, ಕಟ್ಟಡ ಪರವಾನಗಿ 2.36 ಲಕ್ಷ, ಉದ್ದಿಮೆ ಪರವಾನಗಿ 6.91 ಲಕ್ಷ, ಸಕ್ಕಿಂಗ್ ಮಿಷನ್, ಗೊಬ್ಬರ ಮಾರಾಟ, ಎಸ್.ಡಬ್ಲ್ಯು.ಎಂ ಶುಲ್ಕ, ಎನ್.ಒ.ಸಿ, ಅಭಿವೃದ್ಧಿ ಶುಲ್ಕ ಇತರೆ ₹15.63 ಲಕ್ಷ, ವಿವಿಧ ಹರಾಜುಗಳಿಂದ ಬರಬೇಕಾದ ಮೊತ್ತ ₹20 ಲಕ್ಷ, ಆಸ್ತಿ ತೆರಿಗೆಯಿಂದ ಬರಬೇಕಾದ ಆದಾಯ ₹1.72 ಕೋಟಿ, ಖಾತಾ ಬದಲಾವಣೆ, ಖಾತಾ ನಕಲು ₹4.11 ಲಕ್ಷ, ಸರ್ಕಾರದಿಂದ ಬರಬೇಕಾದ ಇತರೆ ಅನುದಾನ ₹49.68 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

‌‌‌‌ಪುರಸಭೆ ಉಪಾಧ್ಯಕ್ಷೆ ರಾಧಿಕಾ ಆನಂದಕೃಷ್ಣ, ಮುಖ್ಯಾಧಿಕಾರಿ ನಜ್ಮಾ, ಸದಸ್ಯರಾದ ಎಂ.ವಿ. ಗೋವಿಂದರಾಜು, ಎಂ.ಆರ್. ಜಗನ್ನಾಥ್, ಎಂ.ಎಸ್. ಚಂದ್ರಶೇಖರ್, ಎಂ.ಎಸ್. ಚಂದ್ರಶೇಖರಬಾಬು, ಎಂ.ಎಲ್. ಗಂಗರಾಜು, ಕೆ. ನಾರಾಯಣ್, ಅಲೀಂ, ಮಂಜುನಾಥ, ಮಂಜುನಾಥ ಆಚಾರ್, ನಟರಾಜು, ಸುಜಾತ ಶಂಕರನಾರಾಯಣ, ಗಾಯಿತ್ರಿ ಉಮೇಶ್, ಶೋಭಾರಾಣಿ ರಾಮು, ಗಿರಿಜಾ ಮಂಜುನಾಥ, ನಾಗಲತಾ, ಪುಟ್ಟಮ್ಮ, ಪಾರ್ವತಮ್ಮ, ನಸೀಮಾ ಬಾನು , ಆಸೀಯಾ ಬಾನು, ಶಾಹಿನಾ ಶಕೀಲ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT