ಶುಕ್ರವಾರ, ಮೇ 7, 2021
26 °C

ತುಮಕೂರು: 9 ಸಾವು, 2 ಸಾವಿರ ದಾಟಿದ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2 ಸಾವಿರ ದಾಟಿದ್ದು, ಒಂದೇ ದಿನದಲ್ಲಿ ದಾಖಲೆಯ 2,273 ಮಂದಿಗೆ ಸೋಂಕು ಹರಡಿದೆ. ಸಾವಿನ ಸಂಖ್ಯೆಯೂ ಏರಿಕೆಯಾಗಿದ್ದು, 9 ಜನರು ಮೃತಪಟ್ಟಿದ್ದಾರೆ.

ತುಮಕೂರು ನಗರದಲ್ಲೇ ಅತಿ ಹೆಚ್ಚು 6, ಗುಬ್ಬಿ ತಾಲ್ಲೂಕಿನಲ್ಲಿ 2 ಹಾಗೂ ತುರುವೇಕೆರೆ ತಾಲ್ಲೂಕಿನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 9ರಲ್ಲಿ 6 ಮಂದಿ ಮಹಿಳೆಯರೇ ಮೃತಪಟ್ಟವರಾಗಿದ್ದಾರೆ.

ಒಂದು ಸಾವಿರದ ಸಮೀಪದಲ್ಲಿ ಇದ್ದ ಸೋಂಕಿತರ ಸಂಖ್ಯೆ ಶನಿವಾರ ಸಾಕಷ್ಟು ಕಡಿಮೆಯಾಗಿತ್ತು. ಭಾನುವಾರ ಒಮ್ಮೆಲೆ ದಿಢೀರ್ ಏರಿಕೆ ಕಂಡಿದ್ದು, 2 ಸಾವಿರ ದಾಟಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ತುಮಕೂರು ಭಾಗ್ಯ ನಗರದ 75 ವರ್ಷದ ಪುರುಷ, 56 ವರ್ಷದ ಪುರುಷ, ಎಸ್‌ಐಟಿ ಬಡಾವಣೆ 21 ವರ್ಷದ ಯುವಕ, ಆರ್‌.ಟಿ.ನಗರದ 66 ವರ್ಷದ ಮಹಿಳೆ, ಶಿವಮೂಕಾಂಬಿಕ ನಗರದ 46 ವರ್ಷದ ಮಹಿಳೆ, ಕೋತಿತೋಪಿನ 60 ವರ್ಷದ ಮಹಿಳೆ ಸಾವನ್ನಪ್ಪಿದವರು.

ಗುಬ್ಬಿ ತಾಲ್ಲೂಕು ಅಮ್ಮನಘಟ್ಟದ 64 ವರ್ಷದ ಮಹಿಳೆ, ಬ್ಯಾಡಗೆರೆ ಗ್ರಾಮದ 70 ವರ್ಷದ ಮಹಿಳೆ, ತುರುವೇಕೆರೆ ತಾಲ್ಲೂಕು ವಿ.ಮಲ್ಲೆ ಗ್ರಾಮದ 55 ವರ್ಷದ ಮಹಿಳೆ ಮೃತಪಟ್ಟವರು.

ತಾಲ್ಲೂಕುವಾರು ವಿವರ: ತುಮಕೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು 1,231, ಶಿರಾ 360, ಪಾವಗಡ 121, ಮಧುಗಿರಿ 114, ಗುಬ್ಬಿ 112, ಕುಣಿಗಲ್ 108, ಚಿಕ್ಕನಾಯಕನಹಳ್ಳಿ 84, ಕೊರಟಗೆರೆ 69, ತುರುವೇಕೆರೆ 61, ತಿಪಟೂರು ತಾಲ್ಲೂಕಿನಲ್ಲಿ 13 ಜನರಿಗೆ ಸೋಂಕು ಖಚಿತಪಟ್ಟಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು