ಶನಿವಾರ, ಮಾರ್ಚ್ 25, 2023
28 °C

ವಿದೇಶಿ ದಂಪತಿ ಮಡಿಲು ಸೇರಿದ ಮಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ರಾಜ್ಯದಲ್ಲಿ ಅತಿ ಹೆಚ್ಚು ನವಜಾತ ಶಿಶುಗಳನ್ನು ಸಂರಕ್ಷಿಸಿ, ಪೋಷಿಸಿ ದತ್ತು ನೀಡಿದ ಜಿಲ್ಲೆಯ ಪ್ರಥಮ ದತ್ತುಕೇಂದ್ರ ವಾಣಿಗೆರೆ ದಯಾಕಿರಣದ ವಿಶೇಷ ಅಗತ್ಯವುಳ್ಳ ಗಂಡು ಮಗುವನ್ನು ವಿದೇಶಿ ದಂಪತಿಗಳು ದತ್ತು ಪಡೆದಿದ್ದಾರೆ.

ಒಂದೂವರೆ ವರ್ಷದ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ನಂತರ ತಾಯಿ ಮಗುವನ್ನು ಬಿಟ್ಟು ಹೋಗಿದ್ದರು. ಪರಿತ್ಯಕ್ತ ಮಗುವನ್ನು ಸಂರಕ್ಷಿಸಿದ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿಗಳ ತಂಡ, ಆರೋಗ್ಯ ತಪಾಸಣೆಯ ಸಮಯದಲ್ಲಿ ವಿಶೇಷ ಅಗತ್ಯವುಳ್ಳ ಮಗುವೆಂದು ಪರಿಗಣಿಸಿ, ದಯಾ ಕಿರಣದಲ್ಲಿ ಪೋಷಣೆ ಮಾಡಲಾಗುತ್ತಿತ್ತು.

ಕಳೆದ ಆರು ತಿಂಗಳ ಹಿಂದೆ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ಸಂಪರ್ಕಕ್ಕೆ ಬಂದ ನ್ಯೂಯಾರ್ಕನ ಶಿಕ್ಷಕ ದಂಪತಿಗಳು, ದಯಾಕಿರಣದಲ್ಲಿ ಬೆಳೆಯುತ್ತಿರುವ ವಿಶೇಷ ಅಗತ್ಯವುಳ್ಳ ಮಗುವನ್ನು ದತ್ತು ಪಡೆಯಲು ನೊಂದಣಿ ಮಾಡಿಸಿದ್ದರು. ಎಲ್ಲ ಪ್ರಕ್ರಿಯೆಗಳು ಆನ್‌ಲೈನ್ ಮೂಲಕ ನಡೆದು, ಕಳೆದ ಆರು ತಿಂಗಳಿನಿಂದಲೂ ವಿಡಿಯೊ ಮೂಲಕ ಮಗುವಿನ ಸಂಪರ್ಕ ಬೆಳೆಸಿ ವಾತ್ಸಲ್ಯ ಪೂರಕ ಬಂಧನಕ್ಕೊಳಗಾಗಿ ಕಳೆದ ವಾರ ಬಂದು ಮಗುವನ್ನು ಪಡೆದಿದ್ದಾರೆ.

ಈ ಸಮಯದಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ದಯಾಕಿರಣ ಮುಖ್ಯಸ್ಥ ‍ಫಾದರ್ ಜೀನೇಶ್ ಕೆ. ವರ್ಕಿ, ಸಂಯೋಜನಾಧಿಕಾರಿ ರಮೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು