ಭಾನುವಾರ, ಸೆಪ್ಟೆಂಬರ್ 22, 2019
23 °C

ತಡೆಗೋಡೆಗೆ ಬೈಕ್ ಡಿಕ್ಕಿ: ಮೂವರ ಸಾವು

Published:
Updated:
Prajavani

ಕೋರ (ತುಮಕೂರು): ನೆಲಹಾಳ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ತಡೆಗೋಡೆಗೆ ಬುಧವಾರ ಬೈಕ್ ಡಿಕ್ಕಿ ಹೊಡೆದು ಮೂರು ಮಂದಿ ಸ್ನೇಹಿತರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹಿರಿಯೂರು ತಾಲ್ಲೂಕು ಖಂಡೇನಹಳ್ಳಿಯ ಪೃಥ್ವಿರಾಜ್ (25), ಅಡವಿರಾಮಜೋಗಿಹಳ್ಳಿಯ ಹನುಮಂತರಾಯ (25), ಚಳ್ಳಕೆರೆ ತಾಲ್ಲೂಕಿನ ಚಿಕ್ಕಚೆಲ್ಲೂರು ಗ್ರಾಮದ ಶಿವಕುಮಾರ (25) ಮೃತರು.

ಇವರು ಬೆಂಗಳೂರಿನ ವಿವಿಧ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಆಂಧ್ರಪ್ರದೇಶದ ಅಮರಾಪುರದಲ್ಲಿ ಮಂಗಳವಾರ ಸಂಬಂಧಿಕರ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮರಳಿ ಬೆಂಗಳೂರಿಗೆ ಒಂದೇ ಬೈಕ್‌ನಲ್ಲಿ ಹೊರಟಿದ್ದರು ಎಂದು ಕೋರ ಠಾಣೆ ಸಬ್ ಇನ್‌ಸ್ಪೆಕ್ಟರ್ ಶೇಷಾದ್ರಿ ಮಾಹಿತಿ ನೀಡಿದರು.

Post Comments (+)