ಶನಿವಾರ, ಜೂಲೈ 4, 2020
21 °C

ಪತ್ನಿಯ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ಪಟ್ಟಣದ ಮಗ್ಗದವರ ಬೀದಿಯ ನಾಗರಾಜು (26) ಪತ್ನಿ ದಿವ್ಯಾ (22) ಶೀಲ ಶಂಕಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿ ತಾನೇ ಪೊಲೀಸರಿಗೆ ಶರಣಾಗಿದ್ದಾರೆ.

ತಾಲ್ಲೂಕಿನ ಜಿ.ಹೊಸಹಳ್ಳಿ ಗೇಟ್‌ನಲ್ಲಿ ತಾಯಿಯೊಂದಿಗೆ ಫಾಸ್ಟ್‌ಫುಡ್ ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ನಾಗರಾಜು, ವರ್ಷದ ಹಿಂದೆ ನಿಟ್ಟೂರು ಹೋಬಳಿಯ ತಳವಾರನಹಳ್ಳಿಯ ದಿವ್ಯಾ ಅವರನ್ನು ವಿವಾಹವಾಗಿದ್ದರು. 

‘ದಿವ್ಯಾಗೆ ಮುಂಚಿತವಾಗೇ ಇನ್ನೊಬ್ಬರೊಂದಿಗೆ ವಿವಾಹವಾಗಿದೆ. ಆ ವಿಷಯ ಮರೆಮಾಚಿ ನನ್ನೊಂದಿಗೆ ಮರು ಮದುವೆ ಮಾಡಿದ್ದಾರೆ ಎಂದು ಅನುಮಾನಿಸಿ ಆರೋಪಿ ಜಗಳ ಮಾಡುತ್ತಿದ್ದನು. ಮನೆಗೆ ಬೇರೆ ವ್ಯಕ್ತಿ ಬಂದು ಹೋಗುತ್ತಾನೆ ಎಂದು ಕಲಹ ಮಾಡುತ್ತಿದ್ದ. ಪತ್ನಿಯ ಚಲನವಲನಗಳ ಮೇಲೆ ನಿಗಾಯಿಡಲು ಮನೆಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿಕೊಂಡಿದ್ದನು’ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್‌ 3ರ ಬೆಳಗಿನ ಜಾವ 5ರ ಸುಮಾರಿಗೆ ದಂಪತಿ ನಡುವೆ ಜಗಳ ತಾರಕಕ್ಕೇರಿದೆ. ಆಗ ಪತಿ ಚಾಕುವಿನಿಂದ ಮೂರು ಕಡೆ ಹಲ್ಲೆ ನಡೆಸಿ ಜೀವ ಹೋಗಿರುವುದನ್ನು ಖಚಿತಪಡಿಸಿಕೊಂಡು ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ತಿಳಿಸಿದರು.

ಡಿವೈಎಸ್‍ಪಿ, ಕುಮಾರಪ್ಪ, ತಹಶೀಲ್ದಾರ್ ಪ್ರದೀಪ್ ಕುಮಾರ್, ಸಿಪಿಐ ರಾಮಕೃಷ್ಣಯ್ಯ, ಪಿಎಸ್ಐ ಜ್ಞಾನಮೂರ್ತಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಾಲ್ಕು ದಿನಗಳಲ್ಲಿ ಪಟ್ಟಣದಲ್ಲಿ ಎರಡು ಕೊಲೆ ಪ್ರಕರಣಗಳು ನಡೆದಿದ್ದು, ನಾಗರಿಕರನ್ನು ಬೆಚ್ಚಿಬೀಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.