ತಿಪಟೂರು: ಪ್ರಧಾನಮಂತ್ರಿ ಜಲಜೀವನ್ ಮಿಷನ್ ಯೋಜನೆ ಮೂಲಕ ರಾಜ್ಯದ ಗ್ರಾಮೀಣ ಭಾಗದ ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ರೂಪಿಸಲಾಗಿದೆ. ಎರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ತಾಲ್ಲೂಕಿನ ರಂಗಾಪುರ, ಚಿಕ್ಕಕೊಟ್ಟಿಗೆಹಳ್ಳಿ, ಹೊಸಹಳ್ಳಿ ಗ್ರಾಮಗಳ ಕೆರೆಗಳಿಗೆ ನಾಗಮಂಗಲ ನಾಲೆಯ ಮೂಲಕ ₹5 ಕೋಟಿ ವೆಚ್ಚದಲ್ಲಿ ಏತನೀರಾವರಿ ಯೋಜನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಹಳ್ಳಿಗಳಲ್ಲಿನ ನೀರಿನ ಮೂಲಗಳನ್ನು ಉಳಿಸುವ ಅಗತ್ಯವಿದೆ. ಹಾಗಾಗಿ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಗೆ ಒತ್ತು ನೀಡುತ್ತಿದ್ದೇವೆ. ಆದ್ದರಿಂದ ಹೆಚ್ಚು ನೀರು ಇರುವ ಕಡೆಯಿಂದ 25-30 ಹಳ್ಳಿಗಳಿಗೆ ನೀರನ್ನು ಶುದ್ಧಿಕರಿಸಿ ನೀಡಲು ಯೋಜನೆ ರೂಪಿಸಲಾಗುತ್ತಿತ್ತು. ಆದರೆ ಕಳೆದ ವಾರದಿಂದ ಯೋಜನೆ ಬದಲಿಸಿ ಪ್ರತಿ ಗ್ರಾಮಗಳಲ್ಲಿ ಇರುವ ಕೆರೆ, ಕಟ್ಟೆಗಳಿಗೆ ನೀರು ನಿಲ್ಲಿಸಿ ಅಲ್ಲಿನ ಅಂತರ್ಜಲವನ್ನು ವೃದ್ಧಿಸಿ, ಪುನಶ್ಚೇತನಗೊಳಿಸಿ ನೀರು ನೀಡಲು ಅಲೋಚಿಸಲಾಗಿದೆ. ಯೋಜನೆಯ ಮೂಲಕ ಪ್ರತಿಯೊಬ್ಬರಿಗೆ 55 ಲೀಟರ್ ನೀರು ನೀಡಲು ಕಾರ್ಯಕ್ರಮ ರೂಪಿಸಲಾಗಿದೆ
ಎಂದರು.

ಹೇಮಾವತಿ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆಗಳಿಂದ ಜಿಲ್ಲೆಗೆ 15 ಟಿಎಂಸಿ ಕುಡಿಯುವ ನೀರಿನ ಯೋಜನೆಗಳನ್ನು ವ್ಯವಸ್ಥಿತವಾಗಿ ರೂಪಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ರಾಜಕೀಯ ಜಿಜ್ಞಾಸೆಯಿಂದ 9 ತಿಂಗಳಿನಿಂದ ಜಿಲ್ಲಾ ಪಂಚಾಯಿತಿ ಸಭೆ ನಡೆದಿಲ್ಲ. ಜಿಲ್ಲಾ ಪಂಚಾಯಿತಿಯ ₹589 ಕೋಟಿ ಅನುದಾನ ಸದಸ್ಯರ ರಾಜಕೀಯ ಪ್ರತಿಷ್ಠೆಯಿಂದ ಪೋಲಾಗುವ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಮಾಹಿತಿ ನೀಡಿದ್ದಾರೆ. ಎಲ್ಲ ಸದಸ್ಯರಿಗೆ ಪತ್ರ ಬರೆದು ಕಾಮಗಾರಿಗಳಿಗೆ ಅನುಮೋದನೆ ನೀಡಲು ಬೇಡಿಕೊಳ್ಳಲು ಸ್ಥಿತಿ ಬಂದಿರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆರೆಗೋಡಿ ರಂಗಾಪುರ ಕ್ಷೇತ್ರದ ಅಧ್ಯಕ್ಷ ಗುರುಪರದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಸರ್ಕಾರ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಕೋವಿಡ್ನಿಂದಾಗಿ ರೈತರ ಆದಾಯ ಕಡಿಮೆಯಾಗಿ ಹತ್ತು ವರ್ಷ ಹಿಂದಕ್ಕೆ ಹೋದಂತಾಗಿದೆ. ಮುಂದೆ ಆರ್ಥಿಕವಾಗಿ ಸದೃಢವಾಗಲು ನೀರಾವರಿ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದರು.

ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ಈ ಭಾಗದ ಜನರ ಬಹಳ ದಿನದ ಕನಸು ನನಸಾದಂತಾಗಿದೆ. ತಾಲ್ಲೂಕಿಗೆ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿರುವುದು ಸಂತಸದ ಸಂಗತಿ ಎಂದರು.

ಎಪಿಎಂಸಿ ಅಧ್ಯಕ್ಷ ಎಚ್.ಬಿ.ದಿವಾಕರ್, ನಗರಸಭೆಯ ಅಧ್ಯಕ್ಷ ಪಿ.ಜೆ.ರಾಮಮೋಹನ್, ದಸರಿಘಟ್ಟ ಗ್ರಾ.ಪಂ ಅಧ್ಯಕ್ಷೆ ರಕ್ಮಿಣಿ ಪುರುಷೋತ್ತಮ್, ರಂಗಾಪುರ ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕಾಂತರಾಜು, ಉಪಾಧ್ಯಕ್ಷೆ ಇಂದ್ರಾಣಿ ದಯಾನಂದ್, ಸದಸ್ಯರಾದ ವಿಶ್ವನಾಥ್ ಹೊಸಹಳ್ಳಿ, ರೂಪಾ ಆಲದಹಳ್ಳಿ, ಜಯಣ್ಣ ರಂಗಾಪುರ, ಶಿವಶಂಕರ್ ಚಿಕ್ಕರಂಗಾಪುರ, ನವೀನ್ ಚಿಕ್ಕ ರಂಗಾಪುರ, ಮುಖಂಡ ಮನೋಹರ್ ರಂಗಾಪುರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.