ಬುಧವಾರ, ಡಿಸೆಂಬರ್ 2, 2020
23 °C

ಲೆಕ್ಕ ಪರಿಶೋಧಕಿ ಆಗುವೆ: ವಾಣಿಜ್ಯ ವಿಭಾಗದ 3ನೇ ಟಾಪರ್ ಪ್ರಜ್ಞಾ ಸತೀಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಪೋಷಕರು, ಶಿಕ್ಷಕರು, ಕಾಲೇಜಿನ ಆಡಳಿತ ಮಂಡಳಿ ಸಹಕಾರ ಸಾಧನೆಗೆ ಪೂರಕವಾಗಿದೆ. ನಿರೀಕ್ಷೆಯಂತೆಯೇ ಫಲಿತಾಂಶ ಲಭಿಸಿದೆ’– 

ಇದು ವಾಣಿಜ್ಯ ವಿಭಾಗದಲ್ಲಿ 600ಕ್ಕೆ 594 ಅಂಕಗಳಿಸಿ ರಾಜ್ಯಕ್ಕೆ 3ನೇ ಟಾಪರ್ ಆಗಿರುವ ನಗರದ ವಿದ್ಯಾವಾಹಿನಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ಸತೀಶ್ ಅವರ ಸಂತಸದ ನುಡಿ.

ವಾಣಿಜ್ಯ ಕೋರ್ಸ್ ಅಧ್ಯಯನ ನನಗೆ ಇಷ್ಟವಿತ್ತು. ಹೀಗಾಗಿ ಕಾಮರ್ಸ್ ಪ್ರವೇಶ ಪಡೆದು ಶ್ರಮ ಪಟ್ಟಿದ್ದಕ್ಕೆ ಹೆಚ್ಚು ಅಂಕಗಳು ಲಭಿಸಿವೆ. ಇದೇ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪೂರೈಸಿ ಭವಿಷ್ಯದಲ್ಲಿ ಲೆಕ್ಕಪರಿಶೋಧಕಿ ಆಗುವ ಆಸೆ ಇದೆ ಎಂದು ಪ್ರಜ್ಞಾ ‘ಪ್ರಜಾವಾಣಿ’ಗೆ ತಿಳಿಸಿದರು.

ಒಬ್ಬ ಮಗಳು ಎಂಜಿನಿಯರ್ ಇದ್ದಾಳೆ. ಇವಳು ಕಾಮರ್ಸ್ ಮಾಡುತ್ತೇನೆ ಎಂದು ಇಷ್ಟಪಟ್ಟು ಕೋರ್ಸ್ ಆಯ್ಕೆ ಮಾಡಿಕೊಂಡಿದ್ದಳು. ಇಷ್ಟದಂತೆ ಓದಿ ಹೆಚ್ಚು ಅಂಕಗಳಿಸಿದ್ದಾಳೆ. ಅವಳ ಆಸೆಯಂತೆಯೇ ಪ್ರೋತ್ಸಾಹಿಸುತ್ತೇವೆ ಎಂದು ಪ್ರಜ್ಞಾ ತಂದೆ ಹಾಗೂ ಇಂಗ್ಲಿಷ್ ಅಧ್ಯಾಪಕರಾದ ಸತೀಶ್ ಹಾಗೂ ತಾಯಿ ಚೇತನಾ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು