ಶಿರಾ: ನಗರದಲ್ಲಿ ಬುಧವಾರ ನಡೆದ ನಗರಸಭೆ ವಿಶೇಷ ಸಭೆಯಲ್ಲಿ ನಗರದ ನಾರಾಯಣಸ್ವಾಮಿ ಕಲ್ಯಾಣ ಮಂಟಪದಲ್ಲಿ ಗ್ಲಾಸ್ಹೌಸ್ ನಿರ್ಮಾಣಕ್ಕೆ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಸದಸ್ಯರಾದ ಆರ್.ರಾಮು, ಅಂಜಿನಪ್ಪ ಮಾತನಾಡಿ, ನಾರಾಯಣ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಿಂದೆ ಬಿ.ಸತ್ಯನಾರಾಯಣ ಅವರು ಶಾಸಕರಾಗಿದ್ದ ಸಮಯದಲ್ಲಿಯೇ ಗ್ಲಾಸ್ಹೌಸ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಟಿ.ಬಿ.ಜಯಚಂದ್ರ ಶಾಸಕರಾಗಿ ಆಯ್ಕೆಯಾದ ನಂತರ ಈ ವಿಚಾರ ಕೈಬಿಡಲಾಗಿದ್ದು ಈಗ ಮತ್ತೆ ಗ್ಲಾಸ್ಹೌಸ್ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸದ ವಿಷಯ. ಗ್ಲಾಸ್ಹೌಸ್ಗೆ ಮಾಜಿ ಸಚಿವ ಬಿ.ಸತ್ಯನಾರಾಯಣ ಅವರ ಹೆಸರು ಇಡುವಂತೆ ಒತ್ತಾಯಿಸಿದರು.

ನಾರಾಯಣಸ್ವಾಮಿ ಕಲ್ಯಾಣ ಮಂಟಪದ ಜಾಗ ಮುಜರಾಯಿ ಇಲಾಖೆಗೆ ಸೇರಿದ್ದು ಯಾವುದೇ ಕಾರಣಕ್ಕೂ ಜಾಗ ಹಸ್ತಾಂತರ ಮಾಡಲು ಬರುವುದಿಲ್ಲ. ಆದರೆ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಂಪುಟ ಸಭೆಯಲ್ಲಿ ಮಂಜೂರು ಮಾಡಿಸಿಕೊಡುವ ಭರವಸೆಯನ್ನು ಶಾಸಕ ಟಿ.ಬಿ.ಜಯಚಂದ್ರ ನೀಡಿದರು.

ಹಸ್ತಾಂತರ: ಸರ್ವೆ ನಂಬರ್ 5 ಮತ್ತು 6ರಲ್ಲಿ ಉಳಿಕೆಯಿರುವ ಸರ್ಕಾರಿ ಜಮೀನನ್ನು ನಗರಸಭೆಗೆ ಹಸ್ತಾಂತರಿಸಲು ತೀರ್ಮಾನಿಸಲಾಯಿತು.

ಕಟ್ಟಡ ಒಡೆಯುವುದು ಬೇಡ: ನಗರದ ಹಳೆ ಪುರಸಭೆ ಕಟ್ಟಡ ಒಡೆದು ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸದಸ್ಯ ಎಸ್.ಎಲ್.ರಂಗನಾಥ್ ತೀವ್ರವಾಗಿ ವಿರೋಧಿಸಿದರು.

ನಗರಸಭೆ ಅಂಗಡಿಗಳಿಂದ ಬಾಡಿಗೆ ವಸೂಲಿ ಮಾಡಲು ನಗರಸಭೆ ಆಡಳಿತ ವಿಫಲವಾಗಿದೆ. ₹6.50 ಕೋಟಿ ಬಾಡಿಗೆ ಬಾಕಿ ಇದೆ. ಕೆಲವರು ₹18ರಿಂದ ₹20 ಲಕ್ಷ ಬಾಕಿ ಇರಿಸಿಕೊಂಡಿದ್ದಾರೆ. ನಗರಸಭೆಯಲ್ಲಿ ಹಣ ಇದೆ ಎಂದು ಯಾರಿಗೋ ಅನುಕೂಲ ಮಾಡಿಕೊಡುವುದು ತಪ್ಪು, ಮೊದಲು ಬಾಡಿಗೆ ವಸೂಲಿ ಮಾಡಿ ನಂತರ ಹೊಸ ವಾಣಿಜ್ಯ ಮಳಿಗೆ ನಿರ್ಮಾಣ ಎಂದು ಸಲಹೆ ನೀಡಿದರು.

ಪುರಸಭೆಯ ಹಳೆ ಕಟ್ಟಡವನ್ನು ಜನತೆಗೆ ಅನುಕೂಲವಾಗಲಿ ಎಂದು ದಾನವಾಗಿ ನೀಡಲಾಗಿದೆ. ಅಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿದರೆ ದಾನಿಗಳು ನ್ಯಾಯಾಲಯಕ್ಕೆ ಹೋಗುತ್ತಾರೆ ಈ ಬಗ್ಗೆ ಎಲ್ಲರ ಜೊತೆ ಚರ್ಚೆ ನಡೆಸಿ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಸದಸ್ಯ ಆರ್.ರಾಮು, ಅಂಜಿನಪ್ಪ, ಉಮಾ ವಿಜಯರಾಜು ಸಲಹೆ ನೀಡಿದರು.

ಶಾಸಕ ಟಿ.ಬಿ.ಜಯಚಂದ್ರ, ತಹಶೀಲ್ದಾರ್ ಆನಂದಕುಮಾರ್, ನಗರಸಭೆ ಪೌರಾಯುಕ್ತ ರುದ್ರೇಶ್, ಅಧ್ಯಕ್ಷ ಜೀಷಾನ್ ಮಹಮೂದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜೇಯಕುಮಾರ್ ಇದ್ದರು.

ಕಾರಂಜಿ ತೆರವು: ಪರ ವಿರೋಧ ಚರ್ಚೆ

ನಗರದ ಪ್ರವಾಸಿ ಮಂದಿರದ ವೃತ್ತ ಹಾಗೂ ದರ್ಗಾ ವೃತ್ತದ ಕಾರಂಜಿ ಒಡೆದು ಸಂಚಾರ ದೀಪ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ಸದಸ್ಯರಾದ ಅಂಜಿನಪ್ಪ ಆರ್.ರಾಮು ಉಮಾವಿಜಯ ರಾಜು ವಿರೋಧಿಸಿದರು. ಕಾರಂಜಿ ಒಡೆಯುವ ಬದಲು ವೃತ್ತದ ಬದಿಯಲ್ಲಿ ಸಂಚಾರ ದೀಪ ಆಳವಡಿಸಿ. ಇದರಿಂದ ಜನರಿಗೆ ಅನುಕೂಲವಾಗುವುದು ಎಂದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಉಪಾಧ್ಯಕ್ಷ ಲಕ್ಷ್ಮಿಕಾಂತ್ ಕಾರಂಜಿಗಳನ್ನು ಉದ್ಯಾನದಲ್ಲಿ ನಿರ್ಮಾನ ಮಾಡಬೇಕು ವೃತ್ತದಲ್ಲ. ಕಾರಂಜಿಯಿಂದ ಅಪಘಾತಗಳು ಹೆಚ್ಚುತ್ತಿದೆ. ಹಬ್ಬದ ಸಮಯದಲ್ಲಿ ಫ್ಲೆಕ್ಸ್ಗಳನ್ನು ಕಟ್ಟುವುದರಿಂದ ಮುಂದೆ ಕೋಮು ಸಂಘರ್ಷಕ್ಕೆ ಕಾರಣವಾಗುವುದು. ಆದ್ದರಿಂದ ಸಂಚಾರ ದೀಪಕ್ಕೆ ಒತ್ತು ನೀಡಬೇಕು ಎಂದು ಪಟ್ಟು ಹಿಡಿದರು. ಪರ- ವಿರೋಧ ಚರ್ಚೆಗಳು ಜೋರಾದಾಗ ಶಾಸಕರು ಸಭೆಯಿಂದ ನಿರ್ಗಮಿಸಿದರು. ಸಭೆ ಮುಕ್ತಾಯಗೊಳಿಸಲಾಯಿತು.