ಕುಣಿಗಲ್: ತಾಲ್ಲೂಕು ಒಕ್ಕಲಿಗ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಜ್ಞಾನಭಾರತಿ ವಿದ್ಯಾಸಂಸ್ಥೆ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡುವೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಪಟ್ಟಣದ ಒಕ್ಕಲಿಗ ಸಂಘದ ಕಚೇರಿಗೆ ಭೇಟಿ ನೀಡಿ ಸಂಘದ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿ ಮಾತನಾಡಿದರು.

ಕಟ್ಟಡ ನಿರ್ಮಾಣಕ್ಕೆ ಅನುದಾನ, ಕೌಶಲ ತರಬೇತಿ ಕೇಂದ್ರ, ಪದವಿ ಕಾಲೇಜು ಮತ್ತು ಡಿಪ್ಲೊಮ ಕೋರ್ಸ್, ಅರೆ ವೈದ್ಯಕೀಯ ಶಿಕ್ಷಣ ಕಾಲೇಜು ಆರಂಭ ಹೀಗೆ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಂಘದ ಕಾರ್ಯದರ್ಶಿ ಅನಂತಯ್ಯ ಹಾಗೂ ಬಿ.ಎಂ.ಹುಚ್ಚೇಗೌಡ ಸಲ್ಲಿಸಿದರು.

ಜ್ಞಾನಭಾರತಿ ವಿದ್ಯಾ ಸಂಸ್ಥೆ ಪ್ರತಿ ವರ್ಷ ಉತ್ತಮ ಪಲಿತಾಂಶ ಪಡೆಯುತ್ತಿದೆ. ಸಂಘದ ಪದಾಧಿಕಾರಿಗಳ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವೆ ಎಂದು ಭರವಸೆ ನೀಡಿದರು.

ಶಾಸಕ ಮಂಜುನಾಥ್, ಆ.ದೇವೇಗೌಡ, ತಾಲ್ಲೂಕು ಒಕ್ಕಲಿಗ ಸಂಘದ ಉಪಾಧ್ಯಕ್ಷ ರಾಜಣ್ಣ, ಖಜಾಂಚಿ ಗಂಗಶಾನಯ್ಯ, ನಿರ್ದೇಶಕರಾದ ನರಸಿಂಹಯ್ಯ, ಸೋಮಶೇಖರ್, ಚನ್ನಪ್ಪ, ಬಲರಾಮರಾಜು, ಪ್ರಾಂಶುಪಾಲ ಡಾ.ಕಪನಿಪಾಳ್ಯ ರಮೇಶ್, ಮುಖ್ಯಶಿಕ್ಷಕ ಗೋವಿಂದೇಗೌಡ ಹಾಗೂ ಪ್ರಕಾಶಮೂರ್ತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.