ತುಮಕೂರು: ತಾಲ್ಲೂಕಿನ ತಿಮ್ಮರಾಜನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತಡರಾತ್ರಿ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ದಂಪತಿ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಕೈದಾಳ ಗ್ರಾಮದ ರಂಗನಾಥ್ (35), ಪತ್ನಿ ತೇಜಸ್ವಿನಿ (28) ಮೃತರು. ಶಿರಾದಿಂದ ತುಮಕೂರಿನ ಕಡೆಗೆ ಬೈಕ್‌ನಲ್ಲಿ ಬರುವಾಗ ಹಿಂಬದಿಯಿಂದ ಬರುತ್ತಿದ್ದ ವಾಹನ ಡಿಕ್ಕಿಯಾಗಿದೆ. ಕೋರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.